ಕಳೆದ ನಾಲ್ಕು ದಿನಗಳ ಹಿಂದೆ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಜಗನ್ಮೋಹನ ಅರಮನೆ ಬಳಿ ಘಟನೆ ನಡೆದಿದೆ. ಭಿಕ್ಷೆ ಬೇಡುವ ವಿಚಾರವಾಗಿ ಮಂಗಳಮುಖಿಯರ ಎರಡು ಗುಪುಗಳ ನಡುವೆ ಗಲಾಟೆ ನಡೆದಿದೆ.
ಒಂದು ಕಡೆಯ ಏರಿಯಾಗೆ ಮತ್ತೊಂದು ಮಂಗಳಮುಖಿಯರ ಗುಂಪು ಬಂದು ಭಿಕ್ಷೆ ಬೇಡುತ್ತಿದ್ದಾರೆ ಎಂದು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮಂಗಳಮುಖಿಯರ ಗುಂಪು ಓರ್ವ ಮಂಗಳಮುಖಿಯ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿರುವುದು ಕಂಡುಬಂದಿದೆ.
ರಸ್ತೆಯಲ್ಲಿ ಬಿದ್ದುಕೊಂಡಿದ್ದ ಮಂಗಳಮುಖಿಯನ್ನು ಮತ್ತಿಬ್ಬರು ಮಂಗಳಮುಖಿಯರು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಇದರ ಹಿಂದುಗಡೆ ಇನ್ನಷ್ಟು ಮಂಗಳಮುಖಿಯರು ಬಡಿದಾಡಿಕೊಂಡಿದ್ದಾರೆ.
ಘಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅವರನ್ನು ಸಮಾಧನಾಪಡಿಸಲು ಸ್ಥಳೀಯರು ಪ್ರಯತ್ನಸಿದರೂ ಸಾಧ್ಯವಾಗದೇ ಹೋಗಿದ್ದು, ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು, ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದಾರೆ.

