Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಗಳ ಸಮಸ್ಯೆ ಇಲ್ಲ : ಕೆ. ಎಚ್ ಮುನಿಯಪ್ಪ

Advertisement
ಬೆಂಗಳೂರು : ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ಗಳ ಸಮಸ್ಯೆ ಇಲ್ಲ ಎಂದು ವಿಧಾನ ಪರಿಷತ್ ನಲ್ಲಿ ಆಹಾರ ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದರು.

ಗೃಹಬಳಕೆ ಸಿಲಿಂಡರ್ ಎಷ್ಟು ಪೂರೈಕೆ ಆಗಬೇಕು ಅಷ್ಟು ಪೂರೈಕೆ ಆಗುತ್ತಿದೆ ಮೂರು ಲಕ್ಷಕ್ಕೂ ಹೆಚ್ಚು ಸಿಲಿಂಡರ್ ಬಳಕೆ ಆಗುತ್ತಿದೆ ಅದನ್ನು ಈಗಾಗಲೇ ಕೊಡುತ್ತಿದ್ದೇವೆ.

ಆದರೆ ಕಮರ್ಷಿಯಲ್ ಸಿಲಿಂಡರ್ ಸಮಸ್ಯೆ ಆಗಿದೆ 20ರಷ್ಟು ಮಾತ್ರ ವಾಣಿಜ್ಯ ಸಿಲಿಂಡರ್ ಕೊಡಲು ಕೇಂದ್ರ ಹೇಳಿದೆ 9000 ಕಮರ್ಷಿಯಲ್ ಸಿಲಿಂಡರ್ ಕೊಡುತ್ತಿದ್ದೇವೆ ಆಸ್ಪತ್ರೆ ಹಾಸ್ಟೆಲ್ ಇಂದಿರಾ ಕ್ಯಾಂಟೀನ್ ಗಳಿಗೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವ ಕೆ ಎಸ್ ಮುನಿಯಪ್ಪ ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಹಲವಡೆ ವಾಣಿಜ್ಯ ಸಿಲಿಂಡರ್ಗಳ ಅಭಾವ ವಿಚಾರಕ್ಕೆ ಸಂಬಂಧಪಟ್ಟಂತೆ ರೆಸ್ಟೋರೆಂಟ್ ಹೋಟೆಲಗಳಿಗೆ 1,000 ಗ್ಯಾಸ್ ಮಾತ್ರ ವಿತರಣೆ ಮಾಡಲಾಗುತ್ತದೆ.

ಆದರೆ ಯಾರಿಗೆ ಕೊಡಬೇಕು ಅಂತ ನಮಗೆ ಗೊತ್ತಾಗುತ್ತಿಲ್ಲ ಹೀಗಾಗಿ ಒಂದು ವಾರ ಸಹಿಸಿಕೊಳ್ಳಬೇಕು ಹೋಟೆಲ್ ಉದ್ಯಮಿಗಳು ಸಹಕಾರ ಕೊಡಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ನೀಡಿದರು.

ಕೇಂದ್ರ ಸರ್ಕಾರ ಸಹ ಇರಾನ್ ಜೊತೆಗೆ ಚರ್ಚಿಸಿ ಪ್ರಯತ್ನ ಮಾಡುತ್ತಿದೆ. 16 ಹಡಗುಗಳು ಕ್ಯೂನಲ್ಲಿ ಇದೆ ಅದು ಬಂದರೆ ಸಿಲಿಂಡರ್ ಸಮಸ್ಯೆ ಬಗೆಹರಿಯುತ್ತದೆ. ಹೋಟೆಲ್ ಮಾಲೀಕರು ಇನ್ನೂ ಒಂದು ವಾರಗಳ ಕಾಲ ಸಹಿಸಿಕೊಳ್ಳಬೇಕು.

ನಾವು ಹೋಟೆಲ್ ಅಸೋಸಿಯೇಷನ್ ಜೊತೆಗೆ ಮಾತನಾಡಿದ್ದೇವೆ. ಒಂದು ವಾರ ಸಹಿಸಿಕೊಂಡರೆ 15000 ಸಿಲಿಂಡರ್ ಸಂಗ್ರಹಿಸಿ ಹಂಚಿಕೆ ಮಾಡುತ್ತೇವೆ. ಯುದ್ಧ ಆಗುತ್ತಿದೆ ಹೋಟೆಲ್ ನವರು ಸ್ವಲ್ಪ ಸಹಕಾರ ಕೊಡಬೇಕು. ಶಾಸಕರ ಭವನಕ್ಕೆ ಕೊಡಬೇಕಾದ ಗ್ಯಾಸ್ ನಲ್ಲಿ 50 ಪ್ರತಿಶತ ಪೂರೈಸುತ್ತೇವೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ