LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಳ್ಳರ ಕೈಚಳಕ: ದೇವರಿಗೇ ಕನ್ನ ಹಾಕಿದ ಕದೀಮರು

55 ಕೆಜಿ ಮುಖವಾಡ, 25 ಕೆಜಿ ಗಂಟೆ ದೋಚಿ ಪರಾರಿ

Advertisement

ಸಾವಗಾಂವ ಕಲಮೇಶ್ವರ ದೇಗುಲದಲ್ಲಿ ಮಧ್ಯರಾತ್ರಿ ಕಳವು

ಬೆಳಗಾವಿ: ದೇವರ ಮನೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ಬೆಳಗಾವಿ ತಾಲೂಕಿನ ಪಶ್ಚಿಮ ಭಾಗದ ಸಾವಗಾಂವದಲ್ಲಿ ನಡೆದಿದೆ! ಇಲ್ಲಿನ ಪ್ರಸಿದ್ಧ ಶ್ರೀ ಕಲಮೇಶ್ವರ ದೇವಸ್ಥಾನಕ್ಕೆ ಮಧ್ಯರಾತ್ರಿ ಕನ್ನ ಹಾಕಿರುವ ಕದೀಮರು, ಕೋಟ್ಯಂತರ ಮೌಲ್ಯದ ಪೂಜಾ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದೆ.
​ಏನೇನು ಗಾಯಬ್?
ರಾತ್ರಿ ಸುಮಾರು ೨ ಗಂಟೆಯ ಸುಮಾರಿಗೆ ದೇಗುಲದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಸಣ್ಣಪುಟ್ಟ ವಸ್ತುವನ್ನೂ ಬಿಡದೇ ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡಿದ್ದಾರೆ:
​55 ಕೆಜಿ ತೂಕದ ಮುಖವಾಡ
25 ಕೆಜಿ ತೂಕದ ಬೃಹತ್ ಗಂಟೆ
​ಪೂಜೆಗೆ ಬಳಸುವ ಸಮೈ (ಹಿತ್ತಾಳೆ ದೀಪಗಳು)
​ಆಂಪ್ಲಿಫೈಯರ್ ಹಾಗೂ ಧ್ವನಿವರ್ಧಕ ಉಪಕರಣಗಳು
​ಮಹಾಪ್ರಸಾದಕ್ಕೆ ಬಳಸುತ್ತಿದ್ದ ದೊಡ್ಡ ದೊಡ್ಡ ಪಾತ್ರೆಗಳು

 


​ಪೋಲಿಸರ ಅಖಾಡ ಪ್ರವೇಶ:
ಗುರುವಾರ ಬೆಳಿಗ್ಗೆ ಪೂಜೆಗೆಂದು ಬಂದ ಗ್ರಾಮಸ್ಥರು ದೇಗುಲದ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
​ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ಕಳ್ಳರ ಬೆನ್ನತ್ತಿದ್ದು, ಜಾಲ ಬೀಸಿದ್ದಾರೆ. ದೇವರಿಗೇ ಕೈ ಮುಗಿಯುವ ಬದಲು ಕೈ ಇಟ್ಟಿರುವ ಈ ಕದೀಮರ ಜೈಲು ಪಯಣ ಯಾವಾಗ? ಪೊಲೀಸರು ಇವರನ್ನು ಯಾವಾಗ ಕಂಬಿ ಹಿಂದೆ ತಳ್ಳಲಿದ್ದಾರೆ ಎಂದು ಇಡೀ ಸಾವಗಾಂವದ ಜನತೆ ಕಾತರದಿಂದ ಕಾಯುತ್ತಿದ್ದಾರೆ.

ವರದಿ ಮಹಾಂತೇಶ್ ಎಸ. ಹುಲಿಕಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಬೇತಿಯಲ್ಲಿದ್ದ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು ಧಾರವಾಡದಲ್ಲಿ ಪತ್ನಿಗೆ ಚಾಕು ಇರಿದು ಕೊಂದು ಪತಿ ನೇಣಿಗೆ ಶರಣುಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಮಾತುಕತೆಮಹಿಳಾ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ 5 ನೇ ಸ್ಥಾನ ಲಾಡ್ಸ್ ಟೆಸ್ಟ್ : ಇಂಗ್ಲೆಂಡ್ ವಿರುದ್ಧ ಪಾಕ್ ಉತ್ತಮ ಆರಂಭಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಸುನಾಮಿ : ಮೊದಲ ದಿನದ ಕಲೆಕ್ಷನ್ ಬಗ್ಗೆ​​​ ಅಧಿಕೃತ ಘೋಷಣೆ ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು :  3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್7.5% ಮೀಸಲಾತಿಯನ್ನು 9ನೇ ಅನುಸೂಚಿಗೆ ಸೇರಿಸಲು ಒಗ್ಗಟ್ಟಿನ ಹೋರಾಟ ಅಗತ್ಯ: ಶರಣಬಸವ ನಾಯಕ ಜಾನೇಕಲ್ಆಡಳಿತ ವ್ಯವಸ್ಥೆ ಪರಿಚಯ ಕಾರ್ಯಕ್ರಮದಡಿಯಲ್ಲಿ  ಕಂದಾಯ ಇಲಾಖೆಗೆ ಭೇಟಿ ನೀಡಿದ ವಿದ್ಯಾರ್ಥಿಗಳುಕಳ್ಳರ ಕೈಚಳಕ: ದೇವರಿಗೇ ಕನ್ನ ಹಾಕಿದ ಕದೀಮರು