ಸಿಂಧನೂರು :46 ನೇ ಉಪ ಕಾಲುವೆ ಕುಸಿತ ಸ್ಥಳಕ್ಕೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಪ್ರತ್ತೇಕವಾಗಿ ಭೇಟಿ ಪರಿಶೀಲನೆ ಕಾರಟಗಿ ತಾಲೂಕಿನ ಮೈಲಾಪುರ ಹಾಗೂ ಸಿಂಧನೂರು ತಾಲೂಕು ದುರ್ಗಾ ಕ್ಯಾಂಪು ನಡುವಿನ 46ನೆಯ ಮೈಲ್ ತುಂಗಭದ್ರಾ ಬಲದಂಡೆ ಕಾಲುವೆ ಕಾಂಕ್ರೀಟ್ ಕುಸಿತದಿಂದ ರೈತರ ಸಂಕಷ್ಟದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾಧ್ಯಮಗಳೊಂದಿಗೆ ಮಾತುಕತೆ ನಡಸಿದರು. 
ತುಂಗಭದ್ರಾ ಬಲದಂಡೆ ಕಾಲುವೆಯ 46ನೇ ಮೈಲಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದು ಬಿದ್ದು ಸುಮಾರು 9 ತಿಂಗಳ ಗತಿಸಿದರೂ, ಸ್ಥಳೀಯ ಶಾಸಕರು,ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಬಿಜೆಪಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಸ್ಥಳ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡುರು. ನೀರಿಲ್ಲದೆ ರೈತರ ಆತಂಕ ಪಟ್ಟಿದ್ದಾರೆ ಈಗಾಗಲೇ ಮಳೆ ಅಭಾವದಿಂದ ರೈತರು ಒಂದು ಬೆಳೆಯನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, ಎರಡನೇ ಬೆಳೆಗೆ ನೀರು ಬಿಡುವ ಸಮಯ ಉಪ ಕಾಲುವೆ ಕುಸಿದು ಬಿದ್ದ ಪರಿಣಾಮ ಸಮಯಕ್ಕೆ ದುರಸ್ತಿ ಮಾಡದಿದ್ದರೆ ರೈತರು ಎರಡನೇ ಬೆಳೆಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ.
ಸ್ಥಳೀಯ ಶಾಸಕರು, ಸಚಿವರು ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತುರ್ತು ಕಾಲುವೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ತಕ್ಷಣವೇ ರೈತರ ಜಮೀನುಗಳಿಗೆ ನೀರು ತಲುಪಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವ ಮಾಜಿ ಸಂಸದರು ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ: ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


