LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ

Advertisement
ಅಧ್ಯಯನ ಸಾಧನೆಗೆ ಸಹಕಾರಿ

ಭಾಲ್ಕಿ : ನಿರಂತರ ಓದು, ಅಧ್ಯಯನ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕ ಬಸವರಾಜ ಪ್ರಭಾ ಹೇಳಿದರು. ಪಟ್ಟಣದ ಲೆಕ್ಚರರ ಕಾಲೋನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮವಸ್ತ್ರ ಎಲ್ಲರೂ ಸಮಾನರೆಂಬ ಭಾವ ಮೂಡಿಸುತ್ತದೆ. ವಿದ್ಯಾರ್ಥಿಗಳು ಸಮವಸ್ತç ಧರಿಸುವುದರಿಂದ ಮೇಲು-ಕೀಳು ಎನ್ನುವ ಭಾವ ಬರುವುದಿಲ್ಲ. ಸಮವಸ್ತç ಶಿಸ್ತಿನ ಸಂಕೇತವೂ ಹೌದು ಎಂದರು.

ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.



ಅಥರ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶೃತಿ ಬಿರಾದಾರ್ ಮಾತನಾಡಿ, ಸಮವಸ್ತ್ರ ಸಮಾನತೆಯ ಸಂಕೇತವಾಗಿದೆ. ಇದರಿಂದ ಕಿರಿಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸಮಾನತೆಯ ಗುಣಗಳನ್ನು ಬೆಳೆಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಮುಖ್ಯಗುರು ಆನಂದ ಕಲ್ಯಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಇಳಕಲ್ ಸಾರಿ ಸೆಂಟರ್‌ನ ಮಾಲೀಕ ವಿಜಯಕುಮಾರ ಸಜ್ಜನ್, ಶಿಕ್ಷಕರಾದ ಜಯಪ್ರಕಾಶ ಸಹಾನೆ, ಅಂಜಲಿ ಜೋಶಿ, ಶುಭಂ ರಾಯವಾಡ ಇದ್ದರು. ಪ್ರಕಾಶ ರುದನೂರೆ ಸ್ವಾಗತಿಸಿದರು. ಉದಯಕುಮಾರ ಜೋಶಿ ನಿರೂಪಿಸಿದರು. ದಿಲೀಪ ಘಂಟೆ ವಂದಿಸಿದರು.

ವರದಿ:ಸಂತೋಷ ಬಿಜಿ ಪಾಟೀಲ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್