LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸೋಲು ಮತ್ತು ಗೆಲವುಗಳನ್ನು ಸಮಾನವಾಗಿ ಕಾಣಬೇಕು: ಭೀಮರಾಯ ಬಿ ರಾಮಸಮುದ್ರ

Advertisement

ಮಾನ್ವಿ: ಪಟ್ಟಣದ ಲೋಯೋಲಾಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಹಾಗೂ ಬಾಲಕರ,ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2026-27ಅನ್ನು ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ತಹಶೀಲ್ದಾರ್ ಭೀಮರಾಯ ಬಿ ರಾಮಸಮುದ್ರ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮೋದಲು ಪ್ರತಿಯೊಂದು ಕ್ಷೇತ್ರದಲ್ಲಿಯು ಪ್ರಯತ್ನ ಮಾಡುವುದನ್ನು ರೂಡಿಸಿಕೊಳ್ಳಬೇಕು.ತಾಲೂಕಿನ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕ್ರೀಡಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಸೋಲು ಮತ್ತು ಗೇಲವುಗಳನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ .ಡಿ.ಮಾತನಾಡಿ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ವಿಶ್ವದ ಸಣ್ಣ ದೇಶಗಳು ವಿವಿಧ ಕ್ರೀಡೆಗಳಲ್ಲಿ ಬಂಗಾರದ ಪದಕಗಳನ್ನು ಪಡೆಯುತ್ತಿದ್ದಾರೆ ನಾವು ಮಾತ್ರ ಬೆಳ್ಳಿಪದಕಕ್ಕೆ ಖುಷಿ ಪಡುವಂತಾಗಿದೆ. ಅತಿಹೆಚ್ಚಿನ ಮಾನವ ಸಂಪನ್ಮೂಲವನ್ನು ಹೊಂದಿದ ದೇಶದಲ್ಲಿ ಉತ್ತಮ ಕ್ರೀಡಾಪಟುಗಳ ಕೋರತೆ ಇದೆ ಕ್ರೀಡಾಕ್ಷೇತ್ರದಲ್ಲಿಹೆಚ್ಚಿನವಕಾಶ ವಿರುವುದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದಲ್ಲಿ ವಿಶ್ವ ಮಟ್ಟದಲ್ಲಿ ಗುರಿತಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ,ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ  ದೈಹಿಕ ಸದೃಡತೆ, ಉತ್ತಮ ಆರೋಗ್ಯವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ತಾಲೂಕಿನ ಕ್ರೀಡಾಪಟ್ಟುಗಳು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೊರಬೇಕು ಕ್ರೀಡೆಗಳ ನಿರ್ಣಯಕರು ಕೂಡ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಸರಿಯಾದ ನಿರ್ಣಯವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಕುಂಟೆಪ್ಪಗೌರಿಪುರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. 
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ನಾಗಮಲ್ಲೇಶ.ಜಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಾರುತಿ,ತಾಲೂಕು ಖಾಸಗಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ರಂಗರಾವು, ನಮ್ಮ ಮಾನ್ವಿ ಕಾಲೇಜಿನ ಅಧ್ಯಕ್ಷರಾದ ಮೌನೇಶಗೌಡ ಹೆಚ್,ಲೋಯೋಲಾ ಕಾಲೇಜಿನ ಪ್ರಾಚಾರ್ಯರಾದ ಶೃತಿ ಖಾಸಿಂ, ಎಸ್.ವಿ.ಪಿ.ಕಲ್ಮಠ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ್, ಗಾಂಧಿ ಕಾಲೇಜಿನ ಪ್ರಾಚಾರ್ಯರಾದ ಡಾ.ಈರಣ್ಣಮರ್ಲಾಟ್ಟಿ, ಮುರಾರ್ಜಿ ಅಲ್ಪ ಸಂಖ್ಯಾತರ ವಸತಿ ಶಾಲೆಯ ಪ್ರಾಚಾರ್ಯರಾದ ವೆಂಕಟೇಶ,ಸರ್ವೋದಯ ಕಾಲೇಜಿನ ಪ್ರಾಚಾರ್ಯರಾದ ರೇಣುಕಾ ಸೇರಿದಂತೆವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಶ್ರೀದೇವಿ,ರವಿಕುಮಾರ,ಶಂಕರ್,ಕೃಷ್ಣವಾಧೂತ ಉಪನ್ಯಾಸಕರಾದ ಅಬ್ದುಲ್ ಹಸನ್,ಸೇರಿದಂತೆ ತಾಲೂಕಿನ ವಿವಿಧ ಕಾಲೇಜುಗಳ ಉಪನ್ಯಾಸಕರು,ವಿದ್ಯಾರ್ಥಿಗಳು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಪ್ಪು ತಿದ್ದುವವರು ತಂದೆ-ತಾಯಿ ಹಾಗೂ ಗುರುಗಳು ಉತ್ತಮ ಮಾರ್ಗದಲ್ಲಿ ನಡೆಯಿರಿ: ಡಾ. ಹೈಂದವಿ ಮಧುಸೂದನ ಗುಪ್ತಾಜೀ ಸೋಲು ಮತ್ತು ಗೆಲವುಗಳನ್ನು ಸಮಾನವಾಗಿ ಕಾಣಬೇಕು: ಭೀಮರಾಯ ಬಿ ರಾಮಸಮುದ್ರಅತಿಥಿ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರಾಗಿ ಡಾ. ಬಸವರಾಜ್ ಸುಂಕೇಶ್ವರ್ ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ಬಸವರಾಜ್ ಕರಡಿಗುಡ್ಡ  ಆಯ್ಕೆ ಪ್ರಜಾಸೇವಾ ಆಂದೋಲನ'ದಲ್ಲಿ ಶಿವಲಿಂಗೇಗೌಡ ಹೇಳಿಕೆ ವಿವಾದ : ಬಿಜೆಪಿ ಅಂಚೆ ಚೀಟಿ ಲೇವಡಿಲೋಕಾಯುಕ್ತ ದಾಳಿ: ಹಾಸ್ಟೆಲ್ ನಿವೃತ್ತ ನೌಕರನ ಬಳಿ 2.71 ಕೋಟಿ ರೂ. ಆಸ್ತಿ ಪತ್ತೆ800 ಜನರ ಪ್ರಾಣ ತೆಗೆದ ಪ್ರಧಾನಿ ಮೋದಿ : ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಜಪಾನ್ ವಿರುದ್ಧ ಸ್ವಲ್ಪದರಲ್ಲೇ ಸೋಲಿನಿಂದ ಪಾರಾದ ಭಾರತ ತಂಡ KPSC' ರದ್ದುಗೊಳಿಸುವ ಬಗ್ಗೆ ಗಂಭೀರ ಚಿಂತನೆ : ಡಿ.ಕೆ. ಶಿವಕುಮಾರ್