LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ

Advertisement

ಹುಬ್ಬಳ್ಳಿ: ಹೆಸ್ಕಾಂ ಎಇಇ ಮನೆ ಹಾಗೂ ಕಚೇರಿ, ಧಾರವಾಡದ ಸಹೋದರನ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಹೆಸ್ಕಾಂ ಎಇಇ ಕಿರಣಕುಮಾರ್ ಬೈಂದೂರ್ ಅವರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ ಹೆಸ್ಕಾಂ ಕಚೇರಿಯಲ್ಲಿ ಎಇಇ ಆಗಿರೋ ಕಿರಣ್ ಕುಮಾರ್ ಅವರ ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿಯಲ್ಲಿರುವ ಮನೆ, ಕಚೇರಿ ಸೇರಿ ಒಟ್ಟು ನಾಲ್ಕು ಕಡೆ ದಾಳಿ ಮಾಡಲಾಗಿದೆ.

ಕಿರಣಕುಮಾರ್ ಬೈಂದೂರ್ ಅವರ ಪತ್ನಿ ಪ್ರೀತಿ ಅವರು ಕೂಡ ಹೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದು, ತಬೀಬ್ ಲ್ಯಾಂಡ್, ಗೋಪನಕೊಪ್ಪ ಹೆಸ್ಕಾಂ ಕಛೇರಿ, ಕಿರಣಕುಮಾರ ಸಹೋದರನ ಮನೆ ಮೇಲೆ ದಾಳಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ಮಾಡಿದ್ದು, ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ್ ಬುದ್ನಿ ಒಳಗೊಂಡ ತಂಡ ಪರಿಶೀಲನೆ ನಡೆಸಿದೆ.

ವರದಿ:ಸುಧೀರ್ ಕುಲಕರ್ಣಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST