ತುರುವೇಕೆರೆ: ಇತ್ತೀಚಿಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆಳೆಯರ ಬಳಗ ಆಶ್ರಯದ ಜೆಪಿ ಆಂಗ್ಲಶಾಲೆಯ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ವಾಲಿಬಾಲ್ ನಲ್ಲಿ ಪ್ರಥಮ, ಡಿಸ್ಕಸ್ ನಲ್ಲಿ ಪ್ರಥಮ, ಶಾರ್ಟ್ ಪುಟ್ ನಲ್ಲಿ ಪ್ರಥಮ, ಹೈ ಜಂಪ್ ನಲ್ಲಿ ಪ್ರಥಮ, ಚೆಸ್ ನಲ್ಲಿ ಪ್ರಥಮ, ಯೋಗದಲ್ಲಿ ಪ್ರಥಮ ಸ್ಥಾನ, 4×100 ಮೀ ರಿಲೇಯಲ್ಲಿ ದ್ವಿತೀಯ, 4×400 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ನಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ, ಶಾರ್ಟ್ ಪುಟ್ ನಲ್ಲಿ ಪ್ರಥಮ, ಚೆಸ್ ನಲ್ಲಿ ಪ್ರಥಮ, ಯೋಗದಲ್ಲಿ ಪ್ರಥಮ ಸ್ಥಾನ ಹಾಗೂ ಡಿಸ್ಕಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ತಾಲೂಕು ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಟಿ.ಎಸ್. ಪ್ರಕಾಶ್ ಗುಪ್ತ, ಕಾರ್ಯದರ್ಶಿ ಜಿ.ಆರ್. ರಂಗೇಗೌಡ, ಖಜಾಂಚಿ ಕೆ.ಟಿ. ಶಿವಣ್ಣ ಸಹ ಕಾರ್ಯದರ್ಶಿ ಟಿ.ಎಸ್. ಲಕ್ಷ್ಮೀನರಸಿಂಹ, ಗೆಳೆಯರ ಬಳಗದ ಆಡಳಿತಾಧಿಕಾರಿ ನಜೀರ್ ಅಹಮದ್, ನಿರ್ದೇಶಕರಾದ ಟಿ.ಎ.ವಿ ಗುಪ್ತ, ಟಿ.ಪಿ. ಜಯಮ್ಮ, ಶೈಕ್ಷಣಿಕ ಆಡಳಿತಾಧಿಕಾರಿ ಡಿ.ಎಚ್. ಲಕ್ಷ್ಮಣಯ್ಯ ಮುಖ್ಯ ಶಿಕ್ಷಕರಾದ ಹೆಚ್.ಆರ್. ತುಕಾರಾಮ್, ಓಂಕಾರ ಮೂರ್ತಿ ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್


