ಕಲಾದಗಿ : ಬಾಗಲಕೋಟೆ ಜಿಲ್ಲೆಯ ವಿವಿಧಡೆ ಭಾಗದಲ್ಲಿ ಅಕ್ರಮ ಗೋಹತ್ಯ ನಡೆಯುತ್ತಿರುವ ಬಗ್ಗೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದ ಮುಖಂಡ ಕುಮಾರಸ್ವಾಮಿ ಹಿರೇಮಠ ಅವರು ಕಳವಳ ವ್ಯಕ್ತಪಡಿಸಿದರು. ಬಾಗಲಕೋಟೆ ಜಿಲ್ಲೆಯ ಅಕ್ರಮ ಗೋ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಆಗಬೇಕಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಜಾಗೃತಿ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಾಳೆ ಮಂಗಳವಾರ ನಡೆಯಲಿರುವ ಕೆರೂರ ಧನಗಳ ಸಂತೆ ನಡೆಯಲಿದೆ ಇಡೀ ಜಿಲ್ಲೆಯಲ್ಲಿ ನಡೆಯಲಿರುವ ದೊಡ್ಡ ಗೋವುಳ ಸಂತೆ ಕೆರೂರ ಹಾಗೂ ಅಮಿನಗಡ ಇಲ್ಲಿ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಮೂಡಿಸಬೇಕು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬೇರೆ ಬೇರೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಆದರೆ 2023ರ ಗೋ ಹತ್ಯೆ ಕಾಯ್ದೆ ಯಾಕೆ ಜಾಗೃತಿ ಮಾಡುತ್ತಿಲ್ಲ ಎಂಬುದು ಸಂಸ್ಯಾತ್ಮಕವಾಗಿದೆ. ನೀವು ಯಾರ ಪರವಾಗಿ ಕೆಲಸ ಮಾಡುತ್ತಿರೋ ಎಂಬುದು ಮುಖ್ಯವಲ್ಲ ಆದರೆ ಕಾಯ್ದೆಯ ಪ್ರಕಾರ ಜಾಗೃತಿ ಮಾಡಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಾಗಲಕೋಟೆ ಜಿಲ್ಲೆಯ ಧನಗಳ ಸಂತೆಯಲ್ಲಿ ನಿಗ ವಹಿಸಬೇಕು ಹಾಗೂ ಗೋಹತ್ಯೆಯ ತಡೆ ಕಾಯ್ದೆ 2023ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು.
ಇನೊವ್ರ ಮುಖಂಡ ವೆಂಕಣ್ಣ ಮಾತನಾಡಿ.
ಬಾಗಲಕೋಟೆ ಜಿಲ್ಲೆಯ ಅಕ್ರಮ ಗೋಹತ್ಯೆ ಮತ್ತು ಅನಧಿಕೃತ ಕಸಾಯಿಖಾಣೆಗಳ ವಿರುದ್ಧ ಪೊಲೀಸ ಇಲಾಖೆಗೆ ಸಾಕ್ಷಿ ಸಮೇತ ಹಲವು ಬಾರಿ ಮಾಹಿತಿ ನೀಡಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಈಗ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತ ಕಸಾಯಿ ಖಾಣೆಗಳಲ್ಲಿ ಗೋವುಗಳ ಹತ್ತೆ ನಡೆಯುವ ಸಾಧ್ಯತೆ ಇದೆ ಅಲ್ಲದೆ ಗೋವುಳ ತ್ಯಾಜ್ಯ ವಸ್ತುಗಳನ್ನು ನದಿ ಹಾಗೂ ಕೆರೆಗಳಿಗೆ ಎಸೆಯಲಾಗುತ್ತದೆ. ಈ ಕುರಿತು ಈಗಾಗಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹಿಂದೂ ಜಾಗರಣ ಮುಖಂಡ ವೆಂಕಣ್ಣ ಆರೋಪಿಸಿದರು.
ವರದಿ : ಬಸವರಾಜ ಪೂಜಾರಿ

