ಚೇಳೂರು : ತಾಲೂಕಿನಲ್ಲಿ ಇಂದು ತಾಲ್ಲೂಕು ಕಛೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ, ಅಧಿಕಾರಿಗಳು ಸುಮ್ಮನೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ, ಆದರೇ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ, ಪ್ರತಿ ದಿನ ಕೂಲಿ ಕಾರ್ಮಿಕರು ಕೆಲಸ ಕಾರ್ಯಗಳನ್ನು ಬಿಟ್ಟು ಬಿಡುವು ಮಾಡಿಕೊಂಡು ಜಾತಿ ಪ್ರಮಾಣ ಪತ್ರ ಆಗಿರಬಹುದು, ಅಥವಾ ಜನನ ಪ್ರಮಾಣ ಪತ್ರ, ಪಾನಿ ಮುಟೇಷನ್, ಮರಣ ಪತ್ರ, ಜಮೀನಿಗೆ ಸಂಬಂದಿಸಿದಂತೆ, ಅಧಿಕಾರಿಗಳು ಹರಟೆ, ಹೊಡೆದು ಮನೆಗೆ ತೆರಳುತ್ತಾರೆ,ಸಾರ್ವಜನಿಕರು. ಮುದುಕ- ಮುದಿಕಿಯರು ಹಳ್ಳಿಗಳಿಂದ ಬಂದು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪತಿನಿತ್ಯ ಬರುತ್ತಾರೆ, ಆದರೇ ಯಾವುದೇ ಫಲ ದೊರೆಯು ವುದಿಲ್ಲ,ಅದೇ ರೀತಿ ಕೆಲವೊಂದು ಅಧಿಕಾರಿಗಳು ಹಣಕ್ಕಾಗಿ ಒಂದೇ ಜಮೀನು, ಎರಡು ಹೆಸರುಗಳಿಗೆ ಮಾಡುವುದು, ಅವ್ಯವಹಾರ ನಡೆಯುತ್ತಿದೆ ಇದರ ಬಗ್ಗೆ ಮೇಲಿನ ಅಧಿಕಾರಿಗಳು ಪರಿಶೀಲನೆ ಮಾಡಿ ಇಂತಹ ಅಧಿಕಾರಿಗಳಿಗೆ ಎಚ್ಚರ ನೀಡಬೇಕು ಎಂದು ನಮ್ಮ ಆಶಾಯವಾಗಿರುತ್ತದೆ.
ಅಡ್ಡ -ತಿಡ್ಡಿ ದ್ವಿಚಕ್ರ ವಾಹನಗಳ ನಿಲುಗಡೆ ಹೇಳೂರಿಲ್ಲಾ, ಕೇಳುವಾರಿಲ್ಲ ಇಷ್ಟ ಬಂದಂತೆ ನಿಲುಗಡೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
ಆದಾಯ ಪ್ರಮಾಣ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಸುಮಾರು ತಿಂಗಳುಗಳೇ ಕಳೆಯುತ್ತಿದೆ, ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ಜರಗಿಸಲು ಸಾರ್ವಜನಿಕರ ಒತ್ತಾಯ ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಕಛೇರಿಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವರದಿ : ಯಾರಬ್. ಎಂ.


