ನವದೆಹಲಿ: ಬಿರುಸಿನ ಎಡಗೈ ಬ್ಯಾಟರ್, ೧೫ ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾದಲ್ಲಿ ನಡೆಯುವ ಎ, ತಂಡಗಳ ತ್ರಿಕೋನ ಕ್ರಿಕೆಟ್ ಸರಣಿಗೆ ಭಾರತ ಎ, ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿ ಈಗಾಗಲೇ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ೨೦೨೫ ರ ಐಪಿಎಲ್ ನಲ್ಲಿ ಹಾಗೂ ಈಗ ನಡೆಯುತ್ತಿರುವ ೨೦೨೦೬ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ೧೧ ಪಂದ್ಯಗಳಿAದ ೪೪೦ ರನ್‌ಗಳಿಸಿದ್ದಾರೆ. ೪೦ ಸಿಕ್ಸರ್‌ಗಳನ್ನು ಬಾರಿಸಿರುವ ಅವರು ೨೩೬.೫೬ ರ ಸ್ಟೆçöÊಕ್ ರೇಟ್ ವೇಗದಲ್ಲಿ ರನ್ ಹರಿಸಿದ್ದಾರೆ.
ಇದೇ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಪ್ರಿಯಾಂಶ ಆರ್ಯ, ಪ್ರಭಸಿಮರನ್ ಸಿಂಗ್, ಅನ್ಸೂಲ್ ಕಾಂಬೋಜ್ ಹಾಗೂ ಸೂರ್ಯಂಶ ಶೇಗ್ಡೆ ತಂಡದಲ್ಲಿ ಸ್ಥಾನ ಪಡೆದ ಇತರ ಆಟಗಾರರಾಗಿದ್ದಾರೆ.

