ಮುಂಬೈ: ಇಂದಿನಿಂದ ಸೈಯದ್ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಇಲ್ಲಿನ ವಾಂಕೇಡೆ ಮೈದಾನದಲ್ಲಿ ಇಂದು ಕರ್ನಾಟಕ ತಂಡವು ಪಶ್ಚಿಮ ಬಂಗಾಳ್ ತಂಡವನ್ನು ಎದುರಿಸಲಿದೆ.
ಮದ್ಯಾನ್ಹ 4:30 ಕ್ಕೆ ಪಂದ್ಯ ಆರಂಭವಾಗುತ್ತಿದ್ದು, ಎರಡು ಬಲಿಷ್ಟ ತಂಡಗಳು ಉತ್ತಮ ಆರಂಭಕ್ಕೆ ಯತ್ನಿಸಲಿವೆ. ಜಿಯೋ ಹಾಟ್ ಸ್ಟಾರ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಮಾಡಲಿದೆ.


