ಆನೇಕಲ್: ಪತಿಯ ಸೋದರ ಸಂಬಂಧಿ ಜೊತೆಯೇ ಪತ್ನಿ ಅನೈತಿಕ ಸಂಬಂಧ ಹೊಂದ್ದಲ್ಲದೇ ಗರ್ಭವತಿಯಾಅದ ವಿಷಯ ತಿಳಿದ ಪತಿ ಅನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಇಲ್ಲಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಡ್ರೈವರ್ ಚಾಲಕನಾಗಿದ್ದ ಮುನಿಕೃಷ್ಣ (35) ಮೃತ ವ್ಯಕ್ತಿ.ಪತ್ನಿಯ ಅನೈತಿಕ ಸಂಬಂಧಕ್ಕೆ ಕೃತ್ಯಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಮುನಿಕೃಷ್ಣ 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ.
ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇದ್ದಾಗ ಕುಮಾಅರ ಎಂಬ ಸಂಬಂಧಿ ದಂಪತಿ ಮಧ್ಯೆ ಎಂಟ್ರಿ ಕೊಟ್ಟಿದ್ದಾನೆ.
ಕುಮಾರ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ನಯನಾಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿರೋದ್ರಿಂದ ಯಾರು ಪ್ರಶ್ನೆ ಮಾಡಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಮುನಿಕೃಷ್ಣನ ಪತ್ನಿ ನಯನ ಹಾಗೂ ಕುಮಾರನ ನಡುವೆ ಪ್ರೀತಿ-ಪ್ರೇಮ-ಪ್ರಣಯ ಶುರುವಾಗಿತ್ತು. ಮುನಿಕೃಷ್ಣ ಮನೆಯಿಂದ ಆಟೋ ತೆಗೆದುಕೊಂಡು ಹೋಗುತ್ತಿದ್ದಂತೆ ಕುಮಾರ ಇತ್ತ ಮನೆಗೆ ಬರುತ್ತಿದ್ದ.


