LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ದುರ್ಗಾ ಪೂಜೆ ವಿಚಾರಕ್ಕೆ ಕಿರಿಕ್ : ಚಾಕು ಇರಿದು ಯುವಕನ ಕೊಲೆ

Advertisement

ಬಾಗಲಕೋಟೆ : ನವರಾತ್ರಿ ದುರ್ಗಾ ಪೂಜೆ ವಿಚಾರಕ್ಕೆ ಕಿರಿಕ್ ಆಗಿ ಚಾಕು ಇರಿದು ಯುವಕನನ್ನು ಕೊಲೆ ಮಾಡಲಾಗಿದೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಿನಾಯಕ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು, ಶ್ರೀನಿವಾಸ ಕದರಿ ಎಂಬವನು ನಿತಿನ್ ನಿಂಬಾಳ್ಕರ್ (25) ಎಂಬ ಯುವಕನನ್ನ ಚಾಕು ಇರಿದು ಕೊಲೆ ಮಾಡಿದ್ದಾನೆ.

ದಸರಾ ಪ್ರಯುಕ್ತ ದಾಂಡಿಯ ನೃತ್ಯ ಬಳಿಕ ದುರ್ಗಾ ಪೂಜೆ ನಡೆಯುತ್ತಿತ್ತು ಈ ವೇಳೆ ಮದ್ಯದ ಅಮಲಿನಲ್ಲಿ ಬಂದ ಶ್ರೀನಿವಾಸ್ ನಿತೀನ್ ಗೆ ಸರಿಯಾಗಿ ಪೂಜೆ ಮಾಡು ಅಂತ ಹೇಳಿದ್ದಾನೆ.

 ಈ ವೇಳೆ ಜಗಳ ನಡೆದು ಪೂಜೆ ಮಾಡುತ್ತಿದ್ದ ನಿತಿನ್ ಶ್ರೀನಿವಾಸ್ ಗೆ ಹೊಡೆದು ಕಳುಹಿಸಿದ್ದಾನೆ ಬಳಿಕ ಶ್ರೀನಿವಾಸ್ ತನ್ನ ಸ್ನೇಹಿತರ ಜೊತೆಗೆ ಬಂದು ಮತ್ತೆ ಗಲಾಟೆ ಮಾಡಿದ್ದಾನೆ.

ಈ ವೇಳೆ ಚಾಕು ಇರಿದು ಕೊಲೆ ಮಾಡಿದ್ದಾನೆ. ನಿತಿನ್ ಸ್ಥಳದಲ್ಲಿ ಸಾವನಪ್ಪಿದ್ದು ಸಂಜು ಎಂಬವನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST