LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ: ಕುಮಾರಸ್ವಾಮಿ 

Advertisement

ಬೆಂಗಳೂರು: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಃಸಿದ್ಧ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಆಗ ನಾನು ನನ್ನ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್​ ಯಾವತ್ತೋ ಮುಗಿದು ಹೋಗ್ತಿತ್ತು. ಅವರ ಜೊತೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ.

 ಆದರೆ ಈಗ ಸಿದ್ದರಾಮಯ್ಯರನ್ನು ಮುಗಿಸಲು ಏನೆಲ್ಲಾ ನಡೆದಿದೆ? ಯಾವಾಗಲೂ ಅಧಿಕಾರದಲ್ಲಿ ನೀವೇ ಇರ್ತಿರಾ, 1 ವರ್ಷ ಕಳೆಯಲಿ ಏನಾಗುತ್ತೆ ಎಂದು ಗೊತ್ತಾಗಲಿದೆ. ಹಾಸನಾಂಬೆ ದೇವಾಲಯದ ಬಾಗಿಲು ಶೀಘ್ರದಲ್ಲೇ ತೆರೆಯಲಿದ್ದು, ದೇವಾಲಯದಲ್ಲಿ ಕುಳಿತು ಮಾತನಾಡುತ್ತೇನೆ. ಸಿದ್ದರಾಮಯ್ಯ ಯಾಕೆ ಬಾಯಿ ಬಿಡ್ತಿಲ್ಲ ಅನ್ನೋದೆ ನನಗೆ ಆಶ್ಚರ್ಯ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆಂದು ಆ ವ್ಯಕ್ತಿ ಹೇಳಿದ್ದು, ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು? ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಹೆಸರು ಹೇಳು ಅಂತಾರೆ.

ಸಿದ್ದರಾಮಯ್ಯ ಎಷ್ಟೊತ್ತು ಇದ್ದರು, ಅವರ ದೇಹದ ಗುರುತು ಇದೆಯಾ ಎಂದು ಕಾರ್ಯಕರ್ತೆಯೊಬ್ಬರನ್ನು ಪ್ರಶ್ನೆ ಮಾಡುತ್ತಾರೆ.

ಆ ವ್ಯಕ್ತಿಯನ್ನ ಟಚ್​ ಮಾಡೋಕೆ ಆಗ್ತಿಲ್ಲ, ಯಾಕೆ ಟಚ್ ಮಾಡೋಕೆ ಆಗ್ತಿಲ್ಲ? ಸಾಕಷ್ಟು ಪೊಲೀಸ್​ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST