LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡುತ್ತೇವೆ: ಯಡಿಯೂರಪ್ಪ

Advertisement

ದಾವಣಗೆರೆ: ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಹೋರಾಟ ಮಾಡಿ, ನೂರಕ್ಕೆ ನೂರು ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಭವಿಷ್ಯ ನುಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಯಡಿಯೂರಪ್ಪ, 2028ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕ್ಲಾರ ರಚಿಸಲಿದೆ ಎಂದರು.

ಕುಮಾರಸ್ವಾಮಿ ಬೇರೆ ಅಲ್ಲ, ನಾವು ಬೇರೆ ಅಲ್ಲ ಎಲ್ಲರೂ ಒಟ್ಟಾಗಿ ಸರ್ಕಾರ ಮಾಡ್ತೀವಿ. ಮುಂದಿನ ಬಾರಿ ಬಿಜೆಪಿ - ಜೆಡಿಎಸ್ ಒಟ್ಟಾಗಿ ಹೋರಾಟ ಮಾಡ್ತೀವಿ. ನಾವಿಬ್ಬರೂ ಸೇರಿ ಸರ್ಕಾರ ಮಾಡ್ತೀವಿ ಅಂತಾ ನೂರಕ್ಕೆ ನೂರು ವಿಶ್ವಾಸವಿದೆ.

 ಈ ಭ್ರಷ್ಟ ಸರ್ಕಾರ ಕಿತ್ತೊಗೆದು ಬಿಜೆಪಿ-ಜೆಡಿಎಸ್ ಸರ್ಕಾರ ತರಬೇಕು. ಕೈ ಜೋಡಿಸಿ ರಾಜ್ಯದ ಜನರಿಗೆ ಪ್ರಾರ್ಥನೆ ಮಾಡ್ತೀನಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಭೀಕರ ಬರ ತಾಂಡವವಾಡ್ತಿದೆ. ರಾಜ್ಯ ಸರ್ಕಾರಕ್ಕೆ ಬೇಜವಾಬ್ದಾರಿತನದ ಪರಮಾವಧಿ, ಅವರಿಗೆ ಬರಗಾಲನೂ ಗೊತ್ತಿಲ್ಲ, ಜನರ ಸಂಕಷ್ಟವೂ ಗೊತ್ತಿಲ್ಲ. ಒಂದ್ ರೀತಿ ತುಘಲಕ್ ದರ್ಬಾರ್ ನಡೆಸಿದ್ದಾರೆ.

ಜನ ತಕ್ಕ ಪಾಠ ಕಲಿಸಬೇಕು, ಬುದ್ದಿ ಕಲಿಸಬೇಕು ಅಷ್ಟೇ. ಅಜೀರ್ಣ ಆಗುವಷ್ಟು ಬಹುಮತ ಸಿಕ್ಕಾಗ ತುಘಲಕ್ ದರ್ಬಾರ್ ನಂತೆ ನಡೆಸುತ್ತಿದ್ದಾರೆ ಎಂದು ಕಿಡಿಕರೈದರು.

ಮಾಧ್ಯಮದವರು ಟೀಕೆ ಟಿಪ್ಪಣಿ ಮಾಡಿ ಸಲಹೆ ಕೊಡ್ತಿದ್ದೀರಿ, ಆದ್ರೆ ತಿದ್ದಿಕೊಳ್ಳಲು ಡಿ.ಕೆ.ಶಿವಕುಮಾರ್ ಸರ್ಕಾರ ಸಿದ್ಧವಿಲ್ಲ. ಅಧಿಕಾರದ ಮದದಿಂದ ಏನ್ ಮಾಡಬೇಕೋ ಮಾಡ್ತಿದ್ದಾರೆ. ಅದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಿದ್ದರಾಮಯ್ಯ ಅಂಥವರನ್ನ ಕೆಳಗಿಳಿಸಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ರು ಡಿ.ಕೆ.ಶಿವಕುಮಾರ್, ಎಲ್ಲರೂ ಸೇರಿ ವ್ಯವಸ್ಥಿತ ಪಿತೂರಿ ಮಾಡಿ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದು ಗೊತ್ತೇ ಇದೆ. ಸಿದ್ದರಾಮಯ್ಯ ಎಲ್ಲವನ್ನೂ ಗಮನಿಸ್ತಿದ್ದಾರೆ, ನೋಡೋಣ ಮುಂದೆ ಏನಾಗುತ್ತೆ ಅಂತ ಎಂದು ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST