LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಶ್ರೀ ಸಿದ್ದನಕೊಳ್ಳ ಕಲಾಪೋಷಕರ ಹಾಗೂ ನಿರಂತರ ಅನ್ನದಾಸೋಹ ಮಠದಲ್ಲಿ ದಸರಾ ನವರಾತ್ರಿ ಮಹೋತ್ಸವ

Advertisement

ಬಾಗಲಕೋಟೆ ಜಿಲ್ಲೆಯ ಇಳಕಲ ತಾಲೂಕಿನ ಐತಿಹಾಸಿಕ ಸುಕ್ಷೇತ್ರ  ಶ್ರೀ ಸಿದ್ದನಕೊಳ್ಳ ಕಲಾಪೋಷಕರ ಹಾಗೂ ನಿರಂತರ ಅನ್ನದಾಸೋಹ ಮಠದಲ್ಲಿ ದಸರಾ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ನವರಾತ್ರಿ ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ ಈ ಒಂಬತ್ತು ದಿನಗಳಲ್ಲಿ ನವಗ್ರಹ ಹೋಮ, ಶ್ರೀ ರುದ್ರ ಹೋಮ, ಮಹಾ ಸುದರ್ಶನ ಹೋಮ ಹಾಗೂ ಶತಚಂಡಿ ಮಹಾಯಾಗದಂತಹ ವಿಶೇಷ ಹೋಮಗಳು ಜರುಗಲಿವೆ ದಸರಾ ಮಹೋತ್ಸವದ ಅಂಗವಾಗಿ ಅ 19ರಂದು ಬೆಳಿಗ್ಗೆ 5 ಗಂಟಗೆ ಇಲ್ಲಿನ ಕನಿಕಾ ಪರಮೇಶ್ವರಿ  ದೇವಸ್ಥಾನದಲ್ಲಿ ನವರಾತ್ರಿ ಹೋಮ ಹಮ್ಮಿಕೊಳ್ಳಲಾಗಿದೆ 

ಹೋಮ ಮುಗಿದ ನಂತರ ವಿಶೇಷ ಕಾರ್ಯಕ್ರಮಗಳು ಗೌರವ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ  ದಿವ್ಯಸಾನಿಧ್ಯ  ಮಠದ ಪೂಜ್ಯರಾದ ಶಿವಕುಮಾರ ಸ್ವಾಮೀಜಿಗಳು, ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ, ವೀಣಾ ಕಾಶಪ್ಪನವರ, ಅಧ್ಯಕ್ಷ ದೇವಾನಂದ ಎಸ್ ಕಾಶಪ್ಪನವರ ಮಾಜಿ ನಗರಸಭೆ ಅಧ್ಯಕ್ಷ ಇಲಕಲ, ಮುಖ್ಯ ಅತಿಥಿಗಳು ಮುತ್ತಣ್ಣ ಕಲ್ಗೋಡಿ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಹುನುಗುಂದ, ಮಹಾಂತೇಶ ನರಗುಂದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಮಹೇಶ ಸಜ್ಜನ ಹೆರೋ ಸರ್ಕಲ್ ಇಂಡಿಯ ಪ್ರೈ ಲಿಮಿಟೆಡ್ ಪುಣೆ, ಎಮ್ ಎನ್ ಬಿರಾದಾರ ನೇವಿ ಆಫೀಸರ್ ಗೋವಾ, ಸಂಜಯ ಜಸ್ವಾಲ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ ಎಂದು ಪೂಜಾರಾದ ಶಿವಕುಮಾರ ಸ್ವಾಮೀಜಿಗಳು ತಿಳಿಸಿದರು.
ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST