LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಂ.ಡಿ. ಜನರಲ್ ಮೆಡಿಸಿನ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದ ಡಾ. ವಿನಯಕುಮಾರ ತುರಮರಿ

Advertisement

ಬೈಲಹೊಂಗಲ : ನಗರದ ಪ್ರತಿಷ್ಠಿತ ತುರಮರಿ ಮನೆತನದ ಡಾ. ವಿನಯಕುಮಾರ ಉಳವಪ್ಪ ತುರಮರಿ ಅವರು ಹುಬ್ಬಳ್ಳಿಯ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ. ಜನರಲ್ ಮೆಡಿಸಿನ್ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಬೈಲಹೊಂಗಲ ನಾಡಿಗೆ ಹಾಗೂ ತುರಮರಿ ಮನೆತನಕ್ಕೆ ಕೀರ್ತಿ ತಂದಿದ್ದಾರೆ. 

ಇವರು ನಿವೃತ್ತ ಮುಖ್ಯೋಪಾಧ್ಯಾಯರಾದ  ಉಳವಪ್ಪ ಮುದಕಪ್ಪ ತುರಮರಿ ಪುತ್ರರಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಶ ಮುದಕಪ್ಪ ತುರಮರಿ ಅವರ ಮೊಮ್ಮಗನಾಗಿದ್ದಾರೆ. ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಕುಟುಂಬದ ಗೌರವವನ್ನು ಹೆಚ್ಚಿಸಿರುವ ಡಾ. ವಿನಯಕುಮಾರ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ವೈದ್ಯಕೀಯ ಶಿಕ್ಷಣದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ಡಾ. ವಿನಯಕುಮಾರ ತುರಮರಿ ಅವರ ಸಾಧನೆಗೆ ಬೈಲಹೊಂಗಲದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಅವರ ತಂದೆ-ತಾಯಿ, ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.

ವರದಿ : ದುಂಡಪ್ಪ ಹೂಲಿ     

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಲಿಗೆ ಬಿದ್ದು ಪ್ರಾರ್ಥಿಸ್ತೇನೆ ಹೋರಾಟ ಕೈಬಿಡಿ : ಕಬ್ಬು ಬೆಳೆಗಾರರ ಹೋರಾಟಗಾರರಿಗೆ ಸಿಎಂ ಮನವಿ 5-10 ಓವರ್ ಗಳ ಪಂದ್ಯವೂ ಗ್ಯಾರಂಟಿ ಇಲ್ಲದಂತಾಗಿದೆ ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕುಮಾರಸ್ವಾಮಿ ಪ್ರಶ್ನೆ ಪ್ರಿಯಾಂಕ್ ಖರ್ಗೆ ಕೇವಲ 'ಸೋಷಿಯಲ್ ಮೀಡಿಯಾ ಮಂತ್ರಿ': ಶ್ರೀರಾಮುಲುನಿರಂತರ ಮಳೆಯಿಂದ ಭಾರತ- ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ವಿಳಂಭಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ವೈದ್ಯ : ಅಮಾನತು ಶಿಕ್ಷೆ ಸಿಜೆಪಿ ಪ್ರತಿಭಟನೆಗೂ.. ಕಾಂಗ್ರೆಸ್​​​ಗೂ ಸಂಬಂಧವಿಲ್ಲ : ಸತೀಶ್ ಜಾರಕಿಹೊಳಿದಿಢೀರ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯರೆಡ್ಡಿ ರಾಜೀನಾಮೆ ಇಂಚಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ : ಹೈಕೋರ್ಟ್ ಮಧ್ಯಪ್ರವೇಶ