ಬೆಂಗಳೂರು: ಅಕ್ಟೋಬರ್ 16 ರಂದು ರಾಜ್ಯಪಾಲರಾಗಿ (Governor) ಪ್ರಮಾಣವಚನ ಸ್ವೀಕರಿಸಿ ಲೋಕಭವನದಲ್ಲಿ ಅಧಿಕಾರ ವಹಿಸಿಕೊಂಡ ಡಾ. ಸುಧಾ ಯಾದವ್ (Sudha Yadav) ಅವರು ಸಂಜೆ ಬೆಂಗಳೂರಿನ ಹೆಚ್.ಆರ್.ಬಿ.ಆರ್ ಬಡಾವಣೆಯಲ್ಲಿರುವ ಶ್ರೀ ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಭೇಟಿ ನೀಡಿದರು.ಅವರೊಂದಿಗೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಇದ್ದರು.
ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯ ಈ ದೇವಾಲಯದಲ್ಲಿ ಶರನ್ನವರಾತ್ರಿಯ ಆರನೇ ದಿನದ ನಿಮಿತ್ತ ಶಾರದಾ ದೇವಿಯನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು.
ವೇದ ಮಂತ್ರಗಳೊಂದಿಗೆ ನಡೆದ ಲಕ್ಷ ಕುಂಕುಮಾರ್ಚನೆ ಪೂಜೆಯಲ್ಲಿ ರಾಜ್ಯಪಾಲರು ಮತ್ತು ಸಚಿವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.
ಗಣ್ಯರ ಶುಭಾಶಯ ಸ್ವೀಕರಿಸಿದ ನಂತರ ದೇವಸ್ಥಾನಕ್ಕೆ ಆಗಮಿಸಿದ ಅವರು, ನಂತರ ಅಲ್ಲಿ ಆಯೋಜಿಸಿದ್ದ ವಿಶೇಷ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದರು.


