LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾಳೆ ಹುಬ್ಬಳ್ಳಿಯಲ್ಲಿ ಮತ್ತೆ ರೈತರ ಪ್ರತಿಭಟನೆ : ಎಲ್ಲೆಡೆ ಬಿಗಿ ಭದ್ರತೆ 

Advertisement

ಹುಬ್ಬಳ್ಳಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸತತ 30 ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದ್ದಾರೆ. 

ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಗಳಿಂದ ಪಾದಯಾತ್ರೆ ಹೊರಟಿರುವ ಸಾವಿರಾರು ಕಬ್ಬು ಬೆಳೆಗಾರರು ಭಾನುವಾರ ಹುಬ್ಬಳ್ಳಿ ತಲುಪಲಿದ್ದು, ಬೃಹತ್ ಜನಾಂದೋಲನ ನಡೆಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್‌ಗೇಟ್‌ನಿಂದ ಎಂ.ಕೆ.ಹುಬ್ಬಳ್ಳಿವರೆಗೆ ಸುಮಾರು 70 ಕಿ.ಮೀ. ಪಾದಯಾತ್ರೆ ನಡೆಸಿರುವ ರೈತರು ಶುಕ್ರವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದರು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೇಡಿಕೆ ಈಡೇರಿಸಬೇಕು; ಇಲ್ಲದಿದ್ದರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನೊಂದೆಡೆ ಹಾವೇರಿ ಜಿಲ್ಲೆಯ ಗುತ್ತಲದಿಂದ ಹೊರಟಿರುವ ರೈತರ ಪಾದಯಾತ್ರೆಗೂ ಶುಕ್ರವಾರ ಚಾಲನೆ ದೊರೆತಿದೆ. ಧಾರವಾಡ ಜಿಲ್ಲೆಯ ಯರಿಕೊಪ್ಪ ಬಳಿಯೂ ರೈತರು ನಿರಂತರ ಧರಣಿ ನಡೆಸುತ್ತಿದ್ದು, ಪಾದಯಾತ್ರೆಗಳು ಹುಬ್ಬಳ್ಳಿ ತಲುಪಿದ ಬಳಿಕ ಒಗ್ಗೂಡಿ ಹೋರಾಟ ನಡೆಸಲಿದ್ದಾರೆ.

ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು 5,500 ರೂ. ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆ. ರಾಜ್ಯ ಸರ್ಕಾರ ಅಬಕಾರಿ ಆದಾಯದಿಂದ 1,000 ರೂ. ಹಾಗೂ ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ 500 ರೂ. ನೀಡಬೇಕು.

 ಕಬ್ಬಿನ ಸಾಗಣೆ, ತೂಕ, ರಿಕವರಿ ಮತ್ತು ಬಿಲ್ ಪಾವತಿಯಲ್ಲಿನ ಅಕ್ರಮ ತಡೆಯಬೇಕು ಎಂದು ರೈತ ಮುಖಂಡ ಪ್ರಕಾಶ ನಾಯಕ ಆಗ್ರಹಿಸಿದ್ದಾರೆ. ತೂಕದ ಯಂತ್ರಗಳ ಅಳವಡಿಕೆಗೆ ಹಿಂದಿನ ಸರ್ಕಾರ ಮೀಸಲಿಟ್ಟಿದ್ದ 100 ಕೋಟಿ ರೂ. ಅನುದಾನ ಜಾರಿಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಲಿಗೆ ಬಿದ್ದು ಪ್ರಾರ್ಥಿಸ್ತೇನೆ ಹೋರಾಟ ಕೈಬಿಡಿ : ಕಬ್ಬು ಬೆಳೆಗಾರರ ಹೋರಾಟಗಾರರಿಗೆ ಸಿಎಂ ಮನವಿ 5-10 ಓವರ್ ಗಳ ಪಂದ್ಯವೂ ಗ್ಯಾರಂಟಿ ಇಲ್ಲದಂತಾಗಿದೆ ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕುಮಾರಸ್ವಾಮಿ ಪ್ರಶ್ನೆ ಪ್ರಿಯಾಂಕ್ ಖರ್ಗೆ ಕೇವಲ 'ಸೋಷಿಯಲ್ ಮೀಡಿಯಾ ಮಂತ್ರಿ': ಶ್ರೀರಾಮುಲುನಿರಂತರ ಮಳೆಯಿಂದ ಭಾರತ- ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ವಿಳಂಭಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ವೈದ್ಯ : ಅಮಾನತು ಶಿಕ್ಷೆ ಸಿಜೆಪಿ ಪ್ರತಿಭಟನೆಗೂ.. ಕಾಂಗ್ರೆಸ್​​​ಗೂ ಸಂಬಂಧವಿಲ್ಲ : ಸತೀಶ್ ಜಾರಕಿಹೊಳಿದಿಢೀರ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯರೆಡ್ಡಿ ರಾಜೀನಾಮೆ ಇಂಚಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ : ಹೈಕೋರ್ಟ್ ಮಧ್ಯಪ್ರವೇಶ