Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಕ್ಷಿಣ ಬಾಗಿಲು ಪ್ರವೇಶ ಈಗಲೂ ಕಠಿಣವಾಗುತ್ತಿದೇಯೇ ಬಿಜೆಪಿಗೆ?

Advertisement


ಮೇ. ೪ ೨೦೨೬ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಾಲಿಗೆ ಅಮೃತ ಘಳಿಗೆಯ ಸಮಯ. ನಿರಂತರ ೧೫ ವರ್ಷಗಳ ಕಾಲ ಅಧಿಕಾರ ನಡೆಸಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವನ್ನು ಕಿತ್ತೊಗೆದು ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಆರಂಭಿಸಿತು.
ಈ ಮಹತ್ತರ ಸಾಧನೆಯೊಂದಿಗೆ ಬಿಜೆಪಿ ಅಧಿಕಾರ ಹೊಂದಿದ ರಾಜ್ಯಗಳ ಪಟ್ಟಿ ಬೆಳೆಯಿತು. ಇದೀಗ ೨೨ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹೊಂದಿದೆ. ಇಷ್ಟೇಲ್ಲ ಸಾಧನೆ ಮಾಡಿದರೂ ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಇನ್ನು ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ ಎಂಬ ಕೊರಗು ಆ ಪಕ್ಷಕ್ಕೆ ಇದೆ.
ತಮಿಳು ನಾಡು, ಕೇರಳ, ಆಂದ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಗೆ ಪಕ್ಷ ಬೆಳೆಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿಯೂ ಅಧಿಕಾರ ನಡೆಸಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಈ ವರೆಗೆ ಅಧಿಕಾರ ಬಂದಿಲ್ಲ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ್, ಛತ್ತಿಸಗಢ, ಹರಿಯಾಣ, ಆಸ್ಸಾಮ, ಗುಜರಾತ್, ದೆಹಲಿ, ಮೇಘಾಲಯ, ಮಣಿಪುರ, ಜಾರ್ಖಂಡ ಹೀಗೆ ಉತ್ತರ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆಯಾದರೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಧಿಕಾರ ಪಡೆಯುವುದು ಬಿಜೆಪಿ ಪಕ್ಷಕ್ಕೆ ಕಠಿಣ ಸವಾಲಾಗಿಯೇ ಮುಂದುವರೆದಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿAದ ಅಧಿಕಾರ ಕಸಿದುಕೊಂಡ ಬಿಜೆಪಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲೂ ತನ್ನ ಪಾರುಪತ್ಯ ಬೆಳೆಸುವುದು ಕಠಿಣ ಕೆಲಸವಲ್ಲ. ಆದರೆ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಈಗಲೂ ಮುಂದುವರೆದಿರುವುದು ಬಿಜೆಪಿ ಪಾಲಿಗೆ ಕಠಿಣ ಕೆಲಸವಾಗಿದೆಯಷ್ಟೇ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ