ನವದೆಹಲಿ: 2008ರ ಅಹಮದಾಬಾದ್ ಸರಣಿ ಸ್ಪೋಟದ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ಖಾಯಂ ಆಗಿದೆ. ಹಾಗೆಯೇ 11 ಅಪರಾಧಿಗಳ ಜೀವಾವಧಿ ಶಿಕ್ಷೆ ಮತ್ತು ಈ ಸರಣಿ ಸ್ಪೋಟದಲ್ಲಿ ಮೃತ ಕುಟುಂಬಗಳಿಗೆ ₹10 ಲಕ್ಷ ಮತ್ತು ಗಾಯಗೊಂಡವರಿಗೆ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.ಎಲ್ಲಾ 49 ಅಪರಾಧಿಗಳು ವಿಶೇಷ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
21 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ
ಫೆಬ್ರವರಿ 2022ರಲ್ಲಿ ವಿಶೇಷ ನ್ಯಾಯಾಲಯ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿತ್ತು. 49 ಜನರಲ್ಲಿ 38 ಜನರಿಗೆ ಮರಣದಂಡನೆ ವಿಧಿಸಲಾಗಿತ್ತು..
ಜುಲೈ 26, 2008 ರಂದು ಅಹಮದಾಬಾದ್ ನಗರದ 21 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟವಾಗಿತ್ತು. ಈ ಸ್ಫೋಟದಲ್ಲಿ ಒಟ್ಟು 56 ಜನರು ಸಾವನ್ನಪ್ಪಿದ್ರೆ 250ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಈ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ (IM) ಹೊತ್ತುಕೊಂಡಿತ್ತು. ಜುಲೈ 26, 2008 ರಂದು ಸಂಜೆ 6:30 ರಿಂದ ರಾತ್ರಿ 8:15 ರ ನಡುವೆ ಅಹಮದಾಬಾದ್‌ನ 20 ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿದವು.


