ದೆಹಲಿ: ಪಾಯಿಂಟ್ ಪಟ್ಟಿಯಲ್ಲಿ ೧ ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ೬ ನೇ ಸ್ಥಾನದಲ್ಲಿರುವ ದೆಹಲಿ ಕ್ಯಾಪಿಟಲ್ಸ್ ತಂಡಗಳು ಇಂದಿಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೫ ನೇ ಪಂದ್ಯದಲ್ಲಿ ಎದುರಾಗಲಿವೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ ೩:೩೦ ಕ್ಕೆ ನಡೆಯಲಿದೆ. ಇದರೊಂದಿಗೆ ಎಲ್ಲ ಹತ್ತು ತಂಡಗಳು ತಮ್ಮ ಪಾಲಿನ ೭ ಪಂದ್ಯಗಳನ್ನು ಆಡಿದಂತಾಗುತ್ತದೆ.
ಪAಜಾಬ್ ಕಿಂಗ್ಸ್ ತನ್ನ ಅಜೇಯ ದಂಡಯಾತ್ರೆಯನ್ನು ಮುಂದುವರೆಸಲು ಯತ್ನಿಸಿದರೆ, ದೆಹಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೇಲೆರಲು ಯತ್ನಿಸಲಿದೆ. ಭರ್ಜರಿ ಫಾರ್ಮ್ನಲ್ಲಿರುವ ಪಂಜಾಬ್ ಕಿಂಗ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

