ಉಪ್ಪಿನಬೆಟಗೇರಿ: ಬೈಕ್ ಹಿಂಬದಿಯಲ್ಲಿ ಕುಳಿತ ಸಾಗುತ್ತಿದ್ದಾಗ ಮಹಿಳೆಯೊಬ್ಬರು ತಲೆ ಸುತ್ತು ಒಂದು ರಸ್ತೆಯ ಮೇಲೆ ಬಿದ್ದು ಮೃತಪಟ್ಟ ಘಟನೆ ಇಲ್ಲಿಯ ಬೈಲಹೊಂಗಲ ರಸ್ತೆಯಲ್ಲಿ ಭಾನುವಾರ ನಡೆದಿದೆ.ಬೆಳಗಾವಿ ಜಿಲ್ಲೆ ಯರಗಟ್ಟಿ, ತಾಲ್ಲೂಕಿನ ದೈವಾಪುರದ ಸುವರ್ಣ ದುರಗಮ್ಮ ಕೆಳಗೇರಿ (45) ಮೃತರು.
ಅದೇ ಗ್ರಾಮದ ಹನಮಂತ ಶ್ಯಾಮಣ್ಣ ಕಾರಪ್ಪನವರ (21) ಬೈಕ್ ಚಲಾಯಿಸುತ್ತಿದ್ದ. ವೇಗದ ಚಾಲನೆಯಿಂದಾಗಿ ಮಹಿಳೆಗೆ ತಲೆ ಸುತ್ತು ಬಂದಿದೆ. ಈ ವೇಳೆ ಮಹಿಳೆ ಕೆಳಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ' ಎಂದು ಪೋಲಿಸರು ತಿಳಿಸಿದರು.ಗದಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

