Ad imageAd image

ಮಹಾತ್ಮಾ ಬೀರಲಿಂಗೇಶ್ವರ ಪಲ್ಲಕಿ ಉತ್ಸವಕ್ಕೆ ಸಿದ್ಧತೆ.

Bharath Vaibhav
ಮಹಾತ್ಮಾ ಬೀರಲಿಂಗೇಶ್ವರ ಪಲ್ಲಕಿ ಉತ್ಸವಕ್ಕೆ ಸಿದ್ಧತೆ.
WhatsApp Group Join Now
Telegram Group Join Now

 ಚಿಟಗುಪ್ಪ:-  ತಾಳಮಡಿಗಿ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ಮಹಾತ್ಮ ಬಿರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಉತ್ಸವಗೊಳ್ಳಲಿರುವ ಪಲ್ಲಕ್ಕಿಯನ್ನು ಗ್ರಾಮದಲ್ಲಿರುವ ದೇವರ ಮನೆಯಿಂದ ಗುಡ್ಡದ ಮೇಲಿರುವ ಬೀರಲಿಂಗೇಶ್ವರ ಮಂದಿರವರೆಗೆ ಡೊಳ್ಳು ಕುಣಿತದೊಂದಿಗೆ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಮಂಗಳವಾರ ಪಲ್ಲಕ್ಕಿನ್ನು ತೆಗೆದುಕೊಂಡು ಹೋಗಲಾಯಿತು.

ಗ್ರಾಮದಿಂದ ಹಿಡಿದು ಬೀರಲಿಂಗೇಶ್ವರ ಮಂದಿರವರೆಗೆ ಹರಕೆ ಹೊತ್ತಿರುವ ಭಕ್ತಾದಿಗಳು ತಂಡಿ ನಮಸ್ಕಾರ ಹಾಕುತ್ತ ತಮ್ಮ ತಮ್ಮ ಹರಕೆಯನ್ನು ತೀರಿಸಿದರು.

ಗ್ರಾಮದ ಯುವಕರಿಂದ ಭಂಡಾರವನ್ನು ಎರಚಿ ಬೀರಲಿಂಗೇಶ್ವರ ಜೈ ಘೋಷ ಹಾಕುತ್ತ ಹೆಜ್ಜೆ ಹಾಕಲಾಯಿತು.ಬಳಿಕ ಮಂದಿರದಲ್ಲಿ ಉಚ್ಚದಿಂದ ಬಂದಿರುವ ಗೋಪಾಲ್ ಮಹಾರಾಜರು,ಪಲ್ಲಕ್ಕಿ ಉತ್ಸವ ಮಾಡಲು ಕಾರಣ ಏನು?.ಹಾಗೂ ಭಂಡಾರದ ಮತ್ತು ಕಂಬಳಿಯ ಮಹತ್ವವನ್ನು ತಮ್ಮ ಸಂದೇಶದ ಮೂಲಕ ಜನರಿಗೆ ತಿಳಿಸಿದರು. ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ಪಂಚ ಕಮಿಟಿಯ ಅಧ್ಯಕ್ಷ ಬಾಬು ಕುಕೆ,ಕಾರ್ಯದರ್ಶಿ ಪಿರಪ್ಪ ನಂದಗಾವ,ಲೋಕೇಶ ನಿರ್ಣ,ತುಕರಾಮ ಭಾಜೋಳಗಿ,ಭೀಮಾಶ ಚಿನಕೇರಿ ಸೇರಿದಂತೆ ಭಕ್ತಾದಿಗಳು ಭಾಗಿಯಾಗಿದ್ದರು.

ವರದಿ:-ಸಜೀಶ ಲಂಬುನೋರ್

WhatsApp Group Join Now
Telegram Group Join Now
Share This Article
error: Content is protected !!