ಸೇಡಂ: -ಸೇಡಂ ವಿಧಾನಸಭಾ ವ್ಯಾಪ್ತಿಯ ದೇವಾಲಯಗಳ ಜೀರ್ಣೋದ್ಧಾರಕ್ಕೆ 10 ಕೋಟಿ ಅನುದಾನ ತಂದಿರುವ ಸಚಿವ ಶರಣಪ್ರಕಾಶ ಪಾಟೀಲರು ಮನಸ್ಸು ಮಾಡಿ ಹೆಚ್ಚಿನ ಅನುದಾನ ತರಬಹುದಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಶಿವು ಅಪ್ಪಾಜಿ ತಿಳಿಸಿದ್ದಾರೆ.
ಕಳೆದ ಅವಧಿಯಲ್ಲಿನ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಶಾಸಕರಿದ್ದುಕೊಂಡೆ 8 ಕೋಟಿ ಅನುದಾನ ತಂದಿದ್ದರು. ಈಗಿರುವ ಡಾ. ಶರಣಪ್ರಕಾಶ ಪಾಟೀಲ ಅವರು ಸಚಿವರೂ ಆಗಿದ್ದಾರೆ. ಆದರೆ 10 ಕೋಟಿ ಅನುದಾನ ತಂದಿರುವುದು ತಕ್ಕುದಲ್ಲ ಎನಿಸುತ್ತಿದೆ.
ಸೇಡಂ ತಾಲೂಕು ತನ್ನ ಪುರಾತನ ದೇವಾಲಯಗಳಿಂದಲೇ ಪ್ರಸಿದ್ಧಿ ಪಡೆದಂತಹ ಸ್ಥಳ. ಇಲ್ಲಿ ಅನೇಕ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯಗಳಿವೆ ಅವುಗಳ ಜೀರ್ಣೋದ್ಧಾಗೊಳಿಸಿ ಪ್ರೇಕ್ಷಣೀಯ ಸ್ಥಳವಾಗಿಸಬಹುದು. ಇದಕ್ಕಾಗಿ ಕನಿಷ್ಠವಾದರೂ 100 ಕೋಟಿ ಅನುದಾನ ತರಬೇಕಾದ ಸಚಿವರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.