Ad imageAd image

ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದಲ್ಲಿ ವಿಶೇಷ ಆಯುಧ ಪೂಜೆ

Bharath Vaibhav
ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದಲ್ಲಿ ವಿಶೇಷ ಆಯುಧ ಪೂಜೆ
WhatsApp Group Join Now
Telegram Group Join Now

 ಕಾಳಗಿ :-ತಾಲೂಕಿನ ಕುಡಹಳ್ಳಿ ಗ್ರಾಮದ ದಶರಥ ನವದಾಗಿ ಯವರ ಮನೆಯಲ್ಲಿ ವಿಶೇಷ ಆಯುಧ ಪೂಜೆ ಜರುಗಿತು, ಮೊದಲಿಗೆ ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿಣವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು, ಬೂದುಗುಂಬಳ ಕಾಯಿ ಇಟ್ಟು ಲಕ್ಷ್ಮಿ ದೇವಿ ಭಾವಚಿತ್ರ ಕ್ಕೆ ಮತ್ತು ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನಗಳಿಗೆ ಪೂಜೆ ಮಾಡಿದರು, ನಂತರ ಬಸಯ್ಯ ಸ್ವಾಮಿ ಯವರು ಆಯುಧ ಪೂಜೆ ಆಚರಣೆ ಕುರಿತು ಮಾತನಾಡಿದರು.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ವಿಜಯದಶಮಿ ಸಂಭ್ರಮಕ್ಕೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ಸತತ ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ಒಂದೊಂದು ವಿಶೇಷ ಪೂಜೆ ಕೈಗೊಳ್ಳುವ ಪ್ರತೀತಿ ಇದ್ದು, ನವರಾತ್ರಿಯ ಕೊನೆಯ ದಿನದಂದು ಆಚರಿಸುವ ಆಯುಧ ಪೂಜಾ ಸಂಭ್ರಮಕ್ಕೆ ಹೆಚ್ಚಿನ ಮಹತ್ವದವಿದೆ.ದೇಶದ್ಯಾಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ವಿಶೇಷ ಪೂಜೆ ನೇರವೇರಿಸಲಾಗುತ್ತದೆ.

ಅದರಲ್ಲೂ ವಾಹನಗಳಿಗೆ ಪೂಜೆ ಸಲ್ಲಿಸುವುದೇ ಒಂದು ಸಂಭ್ರಮವಾಗಿದ್ದು, ವಾಹನಗಳ ಪೂಜೆ ಹಿಂದೆ ಹಲವಾರು ಇಂಟ್ರಸ್ಟಿಂಗ್ ವಿಚಾರಗಳಿವೆ,ಆಯುಧ ಪೂಜೆಯಂದು ಮಾಲೀಕರು ತಮ್ಮ ವಾಹನಗಳನ್ನು ತೊಳೆದು, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿಣವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಬೂದುಗುಂಬಳ ಕಾಯಿ ಒಡೆದು ಪೂಜೆ ಸಲ್ಲಿಸುವುದು ವಾಡಿಕೆ.ಜೊತೆಗೆ ಆಯುಧ ಪೂಜೆಯ ದಿನದಂದು ಮಾವಿನ ಸೊಪ್ಪು, ಬಾಳೆಕಂದು, ಕಬ್ಬು ಹಾಗೂ ಚಂಡು ಹೂವುಗಳಿಂದಲೂ ಆಲಂಕಾರವಾಗಿರುವ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ.ಅದರಲ್ಲೂ ನೂತನವಾಗಿ ಖರೀದಿ ಮಾಡಲಾಗುವ ವಾಹನಗಳಿಂತಲೂ ತುಸು ಹೆಚ್ಚೆ ಎನ್ನುವಂತೆ ಪೂಜೆ ಮಾಡುವುದನ್ನು ನಾವು ನೋಡಬಹುದಾಗಿದ್ದು, ಪೂಜೆ ಸಲ್ಲಿಸಿಯೇ ತಮ್ಮ ಮೊದಲ ಪ್ರಯಾಣ ಆರಂಭಿಸುತ್ತಾರೆ.

ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳ್ವಿಕೆ ಪ್ರಾಪ್ತಿಯಾಗುವುದರೊಂದಿಗೆ ಆಗಬಹುದಾದ ಅನಾಹುತಗಳು ತಪ್ಪಲಿ ಎನ್ನುವಂತಹ ನಂಬಿಕೆಯ ಪ್ರತೀಕವಾಗಿ ಪೂಜೆ ಕೈಗೊಳ್ಳುತ್ತಾರೆ.ಇದಲ್ಲದೇ ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದೆ ಎಂಬುವುದು ಹಲವರ ನಂಬಿಕೆಯಾಗಿದ್ದು, ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗುತ್ತೆ.ಇನ್ನು ಗ್ರಾಮೀಣ ಪ್ರದೇಶದಲ್ಲೂ ಆಯುಧ ಪೂಜೆಗೆ ಅತಿ ಹೆಚ್ಚು ಮಹತ್ವವಿದ್ದು, ರೈತರು ತಮ್ಮ ಕೃಷಿ ಸಾಮಾಗ್ರಿಗಳನ್ನು ಆಯುಧ ಪೂಜೆಯಂದು ವಿಶೇಷ ಪೂಜೆಯನ್ನು ನಡೆಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.ಹಾಗೆಯೇ ಜೀವನದಲ್ಲಿ ನಿತ್ಯ ಉಪಯೋಗಿಸುವ ಆಯುಧಗಳನ್ನು ದೇವರ ಮುಂದಿಟ್ಟು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಾರೆ.ಈ ಸಂಧರ್ಭದಲ್ಲಿ ಕುಡಹಳ್ಳಿ ಗ್ರಾಮದ ದಶರಥ ನವದಾಗಿ ಮನೆ ಸೇರಿದಂತೆ ರಮೇಶ ಮಡಿವಾಳ, ಸಿದ್ದು ಕಬ್ಬಲಿಗ, ರೇವಣಸಿದ್ಧ ಕೇಶ್ವರ್, ಜಗನಾಥ್ ಗಣಪುರ, ಮಾರುತಿ ಗೊಟ್ಟೂರ್, ಜಗನಾಥ ಕಾಳಗಿ ಆಯುಧ ಪೂಜೆಯನ್ನು ಸಡಗರದಿಂದ ಆಚರಣೆ ಮಾಡಿದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
Share This Article
error: Content is protected !!