Ad imageAd image

ಭಾರತೀಯ ಸಂಸ್ಕೃತಿ , ಪರಂಪರೆ ಉಳಿಸಿ ಬೆಳಸಬೇಕು ಶ್ರೀಶೈಲಗೌಡ ಬಿರಾದಾರ

Bharath Vaibhav
ಭಾರತೀಯ ಸಂಸ್ಕೃತಿ , ಪರಂಪರೆ ಉಳಿಸಿ ಬೆಳಸಬೇಕು ಶ್ರೀಶೈಲಗೌಡ ಬಿರಾದಾರ
WhatsApp Group Join Now
Telegram Group Join Now

ವಿಜಯಪುರ :– ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಅನ್ವೇಷಿಸಿ ಅದರ ಪ್ರಾಚೀನ ಸಂಪ್ರದಾಯಗಳು ಹಬ್ಬಗಳು ಶಾಸ್ತ್ರೀಯ ಕಲೆಗಳು ಆಧ್ಯಾತ್ಮಿಕ ಆಚರಣೆಗಳು ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣುತ್ತವೆ ಎಂದು ಸಿಂದಗಿ ಮಂಡಲದ ಬಿ ಜೆ ಪಿ ಕೋಶಾದ್ಯಕ್ಷ ಶ್ರೀಶೈಲಗೌಡ ಬಿರಾದಾರ( ಮಾಗಣಗೇರಿ) ಹೇಳಿದರು.

ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಹಿರೇಮಠದ ಆವರಣದಲ್ಲಿ ಶ್ರೀ ದೇವಿ ಪಾರಾಯಣ ಮಹಾಮಂಗಲ ಮತ್ತು ನವರಾತ್ರಿ ಉತ್ಸವ ಪ್ರಯುಕ್ತ 1108 ಮುತ್ಯದಯರಿಗೆ ಉಡಿ ತುಂಬವ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಭವ್ಯ ಸುಂದರ ಸಾಮಾಜಿಕ ನಾಟಕ “ಮಗ ಹೋದರು ಮಾಂಗಲ್ಯ ಬೇಕು “ಅರ್ಥಾತ ಹೆತ್ತವಳ ಹಾಲು ವಿಷವಾಯಿತು ಎಂಬ ಸುಂದರ ಸಾಮಾಜಿಕ ನಾಟಕ ಅವರು ಉದ್ಘಾಟಿಸಿ ಮಾತನಾಡಿ ಶ್ರೀ ದೇವಿಯನ್ನು ಶೃದ್ಧಾ ಭಕ್ತಿಯಿಂದ ಪ್ರತಿ ನಿತ್ಯ ಪೂಜಿಸುವದರಿಂದ ಜೀವನದಲ್ಲಿ ಬರುವ ಕಷ್ಟಗಳು ದೂರವಾಗುತ್ತವೆ ಎಂದರು.

ಹಿರೇಮಠದ ಮುಖಂಡ ದಾನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ನಾಟಕಗಳು ನಸಶಿ ಹೋಗುವ ಸಮಯದಲ್ಲಿ ಗ್ರಾಮದವರು ಮಗ ಹೋದರು ಮಾಂಗಲ್ಯ ಬೇಕು ಎಂಬ ಸುಂದರ ಸಾಮಾಜಿಕ ನಾಟಕದಲ್ಲಿ ಬರುವ ಉತ್ತಮ ಸಂದೇಶಗಳು ಜೀವನದಲ್ಲಿ ರೂಡಿಸಿ ಕೊಂಡು ಕುಟುಂಬದಲ್ಲಿ ಸುಂದರ ಜೀವನ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಬಂದಾಳ ಗ್ರಾ.ಪಂ.ಅಧ್ಯಕ್ಷ ಯಮನಪ್ಪ ಭೀ ಹೊಸಮನಿ. ಉಪಾಧ್ಯಕ್ಷ ಸರುಬಾಯಿ ಶಂ ನಾಗಾವಿ. ಶಿವಶಂಕರ ಬ ಕುದರಗೊಂಡ. ಪರಶುರಾಮ ಅ ಬಗಲಿ. ಚಂದ್ರಕಾಂತ ಯ ಕೊಣಶಿರಸಗಿ. ನೀಲಮ್ಮ ಶಂ.ಜೋಗೂರ.ಮಲ್ಲಮ್ಮ ಈ ಮಾಗಣಗೇರಿ.ಭಾರತಿ ಶಿ ಬಿರಾದಾರ. ಆನಂದ ಕಂಟಿಗೊಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶಾಂತಯ್ಯ ಗು ಹಿರೇಮಠ.ಬಸಯ್ಯ ಈ ಮಠಪತಿ ಸಾನಿಧ್ಯವಹಿಸಿದರು. ಮಾಂತಯ್ಯ ಶಿ ಹಿರೇಮಠ ಸಭೆ ಅಧ್ಯಕ್ಷತೆವಹಿಸಿದರು.ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಬಸನಗೌಡ ಪೋಲೀಸ ಪಾಟೀಲ.ಸಂಕೇತ ಅನೀಲಕುಮಾರ ಮಾಗಣಗೇರಿ .ಪುನೀತ ಶರಣಯ್ಯ ಹಿರೇಮಠ.ಪಿ.ಯು.ಸಿ ದ್ವೀತಿಯ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 9 ನೇ ರ್‍ಯಾಂಕ್ ಅಭಿಷೇಕ ಮಲ್ಲಿಕಾರ್ಜುನ ಪಡಗಾನೂರ. ಆನಂದ ಪರಶುರಾಮ ಬಗಲಿ. ರಾಷ್ಟ್ರ ಮಟ್ಟದ ಖೋ ಖೋ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿವಶಂಕರ ಬನ್ನಪ್ಪ ಮಾದರ. ಬಸನಗೌಡ ಶ್ರೀಪತಿ ಬಿರಾದಾರ. ಸಾದಿಕ ದೌವಲಸಾಬ ನಧಾಪ. ವಿಶಾಲ ಶರಣಪ್ಪ ಚಲವಾದಿ. ಮಾಳಿಂಗರಾಯ ಕೆ ಮಾಗಣಗೇರಿ. ರಾಖೇಶ ಗಣಿಹಾರ ಹಾಗೂ ಕ್ರೀಡಾ ಪಟು ಮಲ್ಲನಗೌಡ ಸಿ ಬಿರಾದಾರ .ಕವಿ ಕಲಾವಿದ ಸಾಹಿತಿ ಮುತ್ತುರಾಜ ಬ್ಯಾಕೋಡ ಶ್ರೀಮಠದ ಪರವಾಗಿ ಸನ್ಮಾನಿಸಿ ಗೌರವಿಸಿದರು.ಪ್ರತಿಕ್ಷಾ ಹಾಗೂ ರಶ್ಮಿ ಹಿರೇಮಠ ಪ್ರಾರ್ಥನೆ ಗೀತೆ ಹೇಳಿದರು.ಪಿ.ಕೆ.ಪಿ.ಎಸ್ ಬ್ಯಾಂಕ ಮ್ಯಾನೇಜರ ಸುರೇಶ ಭೂಶೇಟ್ಟಿ ಸ್ವಾಗತಿಸಿದರು.ಸಿದ್ಧರಾಮ ಕರಲಗಿ ನಿರೂಪಿಸಿದರು. ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ವಂದಿಸಿದರು.

ವರದಿ. ಸಾಯಬಣ್ಣ ಮಾದರ

WhatsApp Group Join Now
Telegram Group Join Now
Share This Article
error: Content is protected !!