ಕಲಘಟಗಿ: -ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿ ಕೈಗೊಳ್ಳದೆ ಲಕ್ಷಾಂತರ ಹಣ ದುರ್ಬಳಕೆ ಆಗಿದೆ ಎಂಬ ಆರೋದಡಿ ಪಂಚಾಯತಿ ಕಚೇರಿ ಎದುರುಗಡೆ ತಾ.ಪಂ ಮಾಜಿ ಉಪ್ಪಾಧ್ಯಕ್ಷ ಚಂದ್ರಗೌಡ ಪಾಟೀಲ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ 15 ನೇ ದಿನಕ್ಕೆ ಕಾಲಿಟ್ಟಿದೆ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದರು.
ಸತ್ಯಾಗ್ರಹದ ಹಿನ್ನಲೆ ತನಿಖಾ ತಂಡ ರಚನೆ ಮಾಡಿದ್ದು ಅವರು ಸರಿಯಾಗಿ ದಾಖಲೆ ಪರಿಶೀಲನೆ ಮಾಡುತ್ತಿಲ್ಲ ತಂಡದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಆರೋಪಿಸಿದರು.ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ತನಿಖೆ ಮಾಡಲು ಆದೇಶ ಮಾಡಬೇಕು ನಿರ್ಲಕ್ಷ ಮಾಡಿದಲ್ಲಿ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವವರಿಗೆ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದರು.
“ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನಾವು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಅವರ ಬೇಡಿಕೆಯಂತೆ ಹಣ ದುರ್ಬಳಕೆ ಆಗಿದೆ ಎಂಬ ಆರೋಪದಡಿ ತನಿಖಾ ಸಮಿತಿ ರಚಿಸಿದ್ದು ಈಗ ತನಿಖಾ ತಂಡ ವರದಿ ನೀಡಿದ ನಂತರ ಮೇಲಧಿಕಾರಿಗಳಿಗೆ ಕಳಿಸಲಾಗುವದು ಎಂದು ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ ಪ್ರತಿಕ್ರಿಯಿಸಿದರು.”
ವರದಿ : ಶಶಿಕುಮಾರ ಕಲಘಟಗಿ