ಭಾಲ್ಕಿ : -ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭೀಮಣ್ಣ ಖಂಡ್ರೆ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲೊಜಿ ಕಾಲೇಜಿನಲ್ಲಿ ಅ.೪ ರಿಂದ ಕಾಲೇಜ್ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ೨೦೨೪ (ಕಾಲೇಜ್ ಟೆಕ್ನೋ ಆಂಡ್ ಕಲ್ಚರಲ್ ಫೆಸ್ಟ್ ೨೦೨೪) ರ ನಿಮಿತ್ಯ ವಿಜಯೋತ್ಸವ ೨೦೨೪ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಕೆಐಟಿ ಪ್ರಾಂಶುಪಾಲ ಡಾ| ಉದಯಕುಮಾರ ಕಲ್ಯಾಣ ತಿಳಿಸಿದ್ದಾರೆ.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಬುಧವಾರ ಕರೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅ.೪ ಮತ್ತು ಅ.೫ ರಂದು ಎರಡು ದಿವಸಗಳ ಕಾಲ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜಯೋತ್ಸವ ೨೦೨೪ ಕಾರ್ಯಕ್ರಮ ಆಯೋಜಿಸಿದೆ. ಅ.೪ ರಂದು ಹೊಸಬರ ಸಮ್ಮಿಳನ (ಫ್ರೇಶರ್ ಮೀಟ್) ಕಾರ್ಯಕ್ರಮಗಳು ಬೆಳಿಗ್ಗೆ ೮ ಗಂಟೆಯಿAದಲೇ ಪ್ರಾರಂಭಿಸಲಾಗುವುದು.
ಪ್ರಾರಂಭದಲ್ಲಿ ಪ್ರೊ. ಕಾವೇರಿ, ಪ್ರೊ. ಗಾಯತ್ರಿ, ಪ್ರೋ. ಸಂದ್ಯಾರ ರವರ ಸಾರಥ್ಯದಲ್ಲಿ ರಂಗೋಲಿ ಸ್ಪರ್ಧೆ, ಪ್ರೊ| ಎಮ್.ಬಿ.ಪಾಟೀಲ, ಡಾ| ಅನೀಲ ಕೊಡಗೆ, ಪ್ರೊ| ಸುರೇಖಾ.ಎಸ್ ರವರ ಸಾರಥ್ಯದಲ್ಲಿ ಫ್ಲಾö್ಯಸ್ ಮೋಬ್, ಪ್ರೊ| ಜೀವರಾಜ.ಎಸ್, ಪ್ರೊ| ಜಯರಾಜ ರವರ ಸಾರಥ್ಯದಲ್ಲಿ ಕ್ಲೇ ಮಾಡಲಿಂಗ್, ಡಾ| ಕಲ್ಪನಾ ಚಿಕಟವಾರ, ಪ್ರೊ| ರಾಜಕುಮಾರ.ವಿ ರವರ ಸಾರಥ್ಯದಲ್ಲಿ ಪೇಂಟಿಗ್, ಪ್ರೊ| ನಾಗರಾಜ ಮತ್ತು ಪ್ರೋ| ಕಿರಣ ನೇತೃತ್ವದಲ್ಲಿ ಕಾಲೇಜ್, ಡಾ| ಅಖಿಲೇಶ.ಕೆ. ಪ್ರೋ| ಭಾಗ್ಯಶ್ರೀ ಇದ್ದರು.
ವರದಿ:-ಸಂತೋಷ ಬಿಜಿ ಪಾಟೀಲ