Ad imageAd image

ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಅಳವಡಿಕೆ ಬಯಲು

Bharath Vaibhav
ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಅಳವಡಿಕೆ ಬಯಲು
WhatsApp Group Join Now
Telegram Group Join Now

ಮಾನ್ವಿ : ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕತೆ ಕೋಣೆ ಹಾಗು ಶೌಚಾಲಯಗಳು ಇರಬೇಕು ಎಂದು ಸರಕಾರದ ನಿಯಮ. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಶೌಚಾಲಯಗಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಇಟ್ಟಿರುವುದು ಬಯಲಾಗಿದ್ದು,ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುವ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿಯಲ್ಲಿ ಪ್ರಾಂಶುಪಾಲ ಮಹಾಂತೇಶ ವಾರ್ಡನ್ ಶಂಕ್ರಪ್ಪರ ದುರಾಡಳಿತದಿಂದ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆಂದು ಪೋಷಕರೆ ಆರೋಪಿಸಿದ್ದಾರೆ.

ರಾಜಲಬಂಡಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕತೆ ಶೌಚಾಲಯ ಕೋಣೆಗಳು ಇಲ್ಲದ ಕಾರಣ ಶೌಚಾಲಯದಲ್ಲಿ ಯಾರು ರಹಸ್ಯ ಸಿಸಿ ಕ್ಯಾಮೆರಾ ಯಾರು ಇಟ್ಟಿದ್ದಾರೆಂದು ತಿಳಿಯಬೇಕಾಗಿದೆ.

ಒಟ್ಟಾರೆಯಾಗಿ ನೋಡಿದರೆ ವಿದ್ಯಾರ್ಥಿನಿಯರ ಶೌಚಾಲಯ ಕೋಣೆಗಳಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಇಟ್ಟಿರುವುದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದು,ಇದಕ್ಕೆ ಏನಾದರು ಅನಾಹುತವಾದರೆ ಪ್ರಾಂಶುಪಾಲ ಮಹಾಂತೇಶ ವಾರ್ಡನ್ ಶಂಕ್ರಪ್ಪ ಕಾರಣ ಎಂದು ಹೋರಾಟಗಾರರ ಆರೋಪವಾಗಿದೆ.

ವರದಿ : ಶಿವ ತೇಜ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!