ಬೆಂಗಳೂರು: ಗಂಡನ ಸ್ನೇಹಿತನ ಜೊತೆ ಎರಡು ಮಕ್ಕಳ ತಾಯಿ ಪರಾರಿಯಾಗಿದ್ದಾಳೆ. ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ನಿತೇಶ್ ಹಾಗೂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರನ್ನು ಒಪ್ಪಿಸಿ ಇಬ್ಬರು ಸಪ್ತಪದಿ ತುಳಿದಿದ್ದರು. ಇದೀಗ ಪತ್ನಿ ಪತಿಯ ಸ್ನೇಹಿತ ನವೀನ್ ಜೊತೆ ಪರಾರಿಯಾಗಿದ್ದಾಳೆ. ನಿತೇಶ್ ಹಾಗೂ ನವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ, ಸ್ನೇಹಿತರಾಗಿದ್ದರು. ಮದುವೆ ಆದ ಬಳಿಕ ನವೀನ್ ಮನೆಯಲ್ಲಿ ನಿತೇಶ್ ದಂಪತಿ ಬಾಡಿಗೆಗೆ ವಾಸವಿದ್ದರು. ಈ ವೇಳೆ ಪತ್ನಿ ಪತಿಯಿಂದ ಕದ್ದುಮುಚ್ಚಿ ನವೀನ್‌ಗೆ ಕರೆ ಮಾಡೋದು, ಆತನನ ನಂಬರ್‌ನ್ನು ಹುಡುಗಿಯರ ಹೆಸರಲ್ಲಿ ಸೇವ್ ಮಾಡುತ್ತಿದ್ದಳು. ವಿಷಯ ತಿಳಿದ ನಿತೇಶ್ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ. ಇದೆಲ್ಲದರಿಂದ ಬೇಸತ್ತ ಪತಿ ಕೊನೆಗೆ ಬನಶಂಕರಿಯ ಬೇರೊಂದು ಮನೆಗೆ ಬಾಡಿಗೆಗೆ ಶಿಫ್ಟ್ ಆಗಿದ್ದ. 3 ದಿನದ ಹಿಂದೆ ಬ್ಯಾಗ್ ಪ್ಯಾಕ್ ಮಾಡಿ, ಕಂಪನಿಯಲ್ಲಿ ಹೊಟ್ಟೆ ನೋವೆಂದು ಅರ್ಧದಿನ ರಜೆ ಪಡೆದು ಪರಾರಿಯಾಗಿದ್ದಾಳೆ.
ಈ ಸಂಬಂಧ ಪತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ನವೀನ್ ಮತ್ತು ಮಹಿಳೆಯನ್ನು ಪತ್ತೆ ಹಚ್ಚಿದ್ದು, ನಾನು ಗಂಡನ ಜೊತೆ ಹೋಗಲ್ಲ, ಪಿಜಿಗೆ ಹೋಗಿ ಸೇರುತ್ತೇನೆ ಎಂದು ಪತ್ನಿ ಹಠಹಿಡಿದಿದ್ದಾಳೆ. ಸದ್ಯ ತನಿಖೆ ಮುಂದುವರಿದಿದೆ.



