ಅರಸೀಕೆರೆ : ತಾಲೂಕು ಕಸಬಾ ಹೋಬಳಿ ಕಾರೆಹಳ್ಳಿ ತಾಂಡ್ಯದ ಮೋನಿಕ ಅವರ ಸ್ವಗ್ರಾಮಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡರು
ಸಂಜೆ 7:30 ರ ಸಮಯದಲ್ಲಿ ಭೇಟಿ ನೀಡಿ ದುಃಖಭರಿತ ಸಂದರ್ಭದಲ್ಲಿ ಭೇಟಿ ಮಾಡಿ ಕುಟುಂಬದ ನೋವಿನಲ್ಲಿ ಪಾಲುಗೊಂಡು ಆತ್ಮೀಯವಾಗಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿ ಮೋನಿಕಾ ರವರ ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.
ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ₹25,000 ಧನಸಹಾಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ,ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲಿ ಕುಟುಂಬಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.

ಮೃತಪಟ್ಟ ಮೋನಿಕ ಅವರು ತಮ್ಮ ಅಂಗಾಂಗ ದಾನದ ಮೂಲಕ ನಾಲ್ಕು ಜನರಿಗೆ ಜೀವದಾನ ನೀಡಿ ಅನನ್ಯ ಮಾನವೀಯತೆಯನ್ನು ತೋರಿದ್ದಾರೆ.
ತಮ್ಮ ಬದುಕಿನ ಕೊನೆಯ ಕ್ಷಣದಲ್ಲಿಯೂ ಇತರರ ಬದುಕಿಗೆ ಬೆಳಕು ನೀಡಿದ ಅವರ ಈ ಮಹಾನ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಮೋನಿಕ ಅವರ ಈ ತ್ಯಾಗ ಮತ್ತು ದಾನ ಮನೋಭಾವವು ಸಮಾಜಕ್ಕೆ ಮಾದರಿಯಾಗಿ ಉಳಿದು, ಇನ್ನೂ ಅನೇಕರು ಅಂಗಾಂಗ ದಾನದ ಮಹತ್ವವನ್ನು ಅರಿತು ಮುಂದೆ ಬರಲು ಪ್ರೇರಣೆಯಾಗುತ್ತದೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಾಕಿ ಮಂಜುನಾಥ್, ಸುನಿಲ್ ನಾಯ್ಕ್, ಈಶ್ವರ್ ನಾಯ್ಕ್, ಕೃಷ್ಣ ನಾಯ್ಕ, ಹಾಗೂ ಬಂಜಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಜನಪ್ರತಿನಿಧಿಯಾಗಿ ಮಾತ್ರವಲ್ಲ, ಒಬ್ಬ ಮಾನವೀಯ ವ್ಯಕ್ತಿಯಾಗಿ ಅವರ ಈ ನಡೆ ಎಲ್ಲರ ಹೃದಯವನ್ನು ಸ್ಪರ್ಶಿಸಿದೆ.
ದುಃಖದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿದ ಈ ಕಾರ್ಯ ನಿಜಕ್ಕೂ ಮಾನವೀಯತೆಯ ಶ್ರೇಷ್ಠ ಉದಾಹರಣೆಯಾಗಿದೆ.
ವರದಿ : ರಾಜು




