Ad imageAd image

” ಕನ್ನಡಿಗರ ವಿಜಯ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್ ಅವರ ಹುಟ್ಟು ಹಬ್ಬದ ಶುಭ ಕೋರಿದ – ಕಾರ್ಯಕರ್ತರು”

Bharath Vaibhav
” ಕನ್ನಡಿಗರ ವಿಜಯ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್ ಅವರ ಹುಟ್ಟು ಹಬ್ಬದ ಶುಭ ಕೋರಿದ – ಕಾರ್ಯಕರ್ತರು”
WhatsApp Group Join Now
Telegram Group Join Now

ಬೆಂಗಳೂರು: ಪೀಣ್ಯ ದಾಸರಹಳ್ಳಿ ಸರಳ ಸಜ್ಜನಿಕೆ ವ್ಯಕ್ತಿತ್ವದ ಹೊಂದಿದ ಏಕೈಕ ವ್ಯಕ್ತಿ ನಮ್ಮ ಕನ್ನಡಿಗರ ವಿಜಯ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್ ಅವರು ಎಂದರೆ ತಪ್ಪಾಗಲಾರದು ಎಂದು ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪುಟ್ಟೇಗೌಡ ತೆಂಕನಹಳ್ಳಿ ಹೇಳಿದರು.


ಶ್ರೀ ಆದಿಶಕ್ತಿ ದಕ್ಷಿಣ ಕಾಳಿಕಾ ದೇವಿಯ ಪುಣ್ಯಕ್ಷೇತ್ರಕ್ಕೆ ಕನ್ನಡಿಗರ ವಿಜಯ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಆದಿಶಕ್ತಿ ದಕ್ಷಿಣ ಕಾಳಿಕಾ ದೇವಿಗೆ ಪೂಜಾ ಪುನಸ್ಕಾರ ಸಲ್ಲಿಸಿ ನಂತರ ಅನಾಥ ಆಶ್ರಮಕ್ಕೆ ತೆರಳಿ ಅಲ್ಲಿಯ ಜನರಿಗೆ ಊಟ ಹಣ್ಣು ಹಂಪಲು ವಿತರಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಕೋರಿ
ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪುಟ್ಟೇಗೌಡ ತೆಂಕನಹಳ್ಳಿ ಮಾತನಾಡಿದರು.
ಕನ್ನಡಿಗರ ವಿಜಯ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್ ಗೌರವ ಸ್ವೀಕರಿಸಿ ನನ್ನ ಹುಟ್ಟುಹಬ್ಬವನ್ನು ಕನ್ನಡಿಗರ ವಿಜಯ್ ಸೇನೆಯ ಮುಖಂಡರು ಕಾರ್ಯಕರ್ತರು ನನ್ನ ಮೇಲೆ ಪ್ರೀತಿ ನಂಬಿಕೆ ವಿಶ್ವಾಸ ಇಟ್ಟುಕೊಂಡು ಇಂದು ನನಗೆ ಗೌರವಿಸಿದ್ದಕ್ಕೆ ನಿಮ್ಮೇಲ್ಲರಿಗೂ ಚಿರಋಣಿ ಎಂದು ವಿಜಯಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗೇಶಣ್ಣ ಕೆಂಪಣ್ಣ, ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷ ಮನು ಕುಮಾರ್, ಚಾಲಕರ ಘಟಕದ ಅಧ್ಯಕ್ಷ ಪ್ರವೀಣ್ ಭಜರಂಗಿ, ಶಂಕರ್ ,ದೊಡ್ಡಪ್ಪ, ಪ್ರಭು ಫ್ರೆಂಡ್ಸ್ ಕಾಲೊನಿ, ಮಹದೇವ್, ಸುದೀಪ್, ಸುಧೀರ್, ಸಂಜಯ್, ಮಹೇಶ, ಚಂದ್ರ ,ರಾಮರಾಜ್, ಸೆಂದಿಲ್, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ವಿಜಯಕುಮಾರ್ ಅಪಾರ ಅಭಿಮಾನಿಗಳು ವಿವಿಧ ಸಂಘಟನೆಗಳ ಮುಖಂಡರು ಮಹಿಳೆಯರು ಕಾರ್ಯಕರ್ತರು ವಿಜಯ ಕುಮಾರ್ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!