Ad imageAd image

ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು : ವೆಂಕಟೇಶ್ ಗೂರೂಜಿ 

Bharath Vaibhav
ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು : ವೆಂಕಟೇಶ್ ಗೂರೂಜಿ 
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ನವೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಈಗಾಗಲೇ ಕೆಲವು ನಾಯಕರು ಹೇಳಿಕೆ ನೀಡಿದ್ದಾರೆ.

ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಅಹಿಂದ ನಾಯಕತ್ವ ದಾಳ ಉರುಳಿಸಿದ್ದಾರೆ.

ಇದೀಗ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಭವಿಷ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಅಷ್ಟಕ್ಕೂ ವೆಂಕಟೇಶ ಗುರೂಜಿ ಹೇಳಿದ್ದು ಏನೆಂದರೆ, ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್‌ ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ. ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು ಅಂತ ಭವಿಷ್ಯ ನುಡಿದಿದ್ದಾರೆ.

ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಯೋಗ ಇದೆ, ಆಗೇ ಆಗ್ತಾರೆ. 2031ರ ವರೆಗೆ ರಾಜನಂತೆ ಇರ್ತಾರೆ. ಏಕೆಂದ್ರೆ ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ಈ ಯೋಗ ಎಲ್ಲರಿಗೂ ಇರಲ್ಲ, ಅವರ ಜಾತಕದಲ್ಲಿ ಇದೆ.

ಹಾಗಾಗಿ ಸಿಎಂ ಆಗೇ ಆಗ್ತಾರೆ. ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟಿದ್ದೇನೆ. ಅವರಿಗೆ ಮುಖ್ಯಮಂತ್ರಿ ಯೋಗ ಇದೆ, ಅದನ್ನ ಯಾರೂ ತಪ್ಪಿಸಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!