Ad imageAd image

ರಾಜೇಶ್ವರ ಗ್ರಾಮದ ಮುಖಂಡರಿಂದ ಮಾಜಿ ಸಚಿವ ರಾಜಶೇಖರ್ ಪಾಟೀಲಗೆ ಸನ್ಮಾನ

Bharath Vaibhav
ರಾಜೇಶ್ವರ ಗ್ರಾಮದ ಮುಖಂಡರಿಂದ ಮಾಜಿ ಸಚಿವ ರಾಜಶೇಖರ್ ಪಾಟೀಲಗೆ ಸನ್ಮಾನ
WhatsApp Group Join Now
Telegram Group Join Now

ಹುಮನಾಬಾದ: ಹುಮನಾನಾದ ಮತಕ್ಷೇತ್ರ ವ್ಯಾಪ್ತಿಯ ರಾಜೇಶ್ವರ ಗ್ರಾಮ ಪಂಚಾಯತ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ್ದ, ಹಿನ್ನಲೆ ನಗರದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ರಾಜೇಶ್ವರ ಗ್ರಾಮದ ಮುಖಂಡರು ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿ ರಾಜಶೇಖರ ಪಾಟೀಲ್,ಹುಮನಾಬಾದ್ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ನನ್ನ ಆಡಳಿತ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ.

ಕ್ಷೇತ್ರದ ಅಭಿವೃದ್ಧಿಗೆ ಸಂಭಂಧಿಸಿದಂತೆ ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಸಮಯಕ್ಕೊಂದು ಹೇಳಿಕೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ ನಮಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಅಭಿವೃದ್ಧಿ ಕಾರ್ಯಗಳು ಹೇಗೆ ಮಾಡಬೇಕು ಎಂದು ಹೇಳಿಕೆ ನೀಡುತ್ತಾರೆ, ಮತ್ತೊಂದು ಕಡೆ ಎಲ್ಲ ಅಭಿವೃದ್ಧಿ ಕಾರ್ಯ ನಾನು ಶಾಸಕನಾದ ಮೇಲೆ ನಡೆಯುತ್ತಿವೆ ಎಂದು ಹೇಳುತ್ತಿದ್ದಾರೆ.ಅನುದಾನ ಇಲ್ಲದೇ ಅವರು ಹೇಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹುಮನಾಬಾದ್ ಪುರಸಭೆ ನಗರಸಭೆಯಾಗಿ ಹಾಗೂ ರಾಜೇಶ್ವರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು ನಾವು ನಮ್ಮ ಸರಕಾರದ ಮೇಲೆ ಹಾಕಿರುವ ಒತ್ತಡ ಹಾಗೂ ಸತತ ಪ್ರಯತ್ನದ ಫಲವಾಗಿ ಈ ಎಲ್ಲ ಬೇಡಿಕೆಗಳು ಈಡೇರಲು ಸಾಧ್ಯವಾಗಿದೆ ಎಂದು ಹೇಳಿದರು.

ವರದಿ:ಸಜೀಶ ತಾಳಮಡಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!