Ad imageAd image

ಅರಸಿಕೇರೆ: 23 ರಂದು ಕನಕದಾಸರ ಜಯಂತಿ ಆಚರಣೆ

Bharath Vaibhav
ಅರಸಿಕೇರೆ: 23 ರಂದು ಕನಕದಾಸರ ಜಯಂತಿ ಆಚರಣೆ
WhatsApp Group Join Now
Telegram Group Join Now

————————–ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚೆ

ಅರಸೀಕೆರೆ: ಸಮಿತಿ(ರಿ) ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದ್ದು, ಈ ಸಭೆಯಲ್ಲಿ ತಾಲೂಕು ಕುರುಬ ಸಮಾಜ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಂಘ, ಅಹಲ್ಯಬಾಯಿ ಹೋಳ್ಕರ್ ಸಂಘ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕುರುಬರ ಸಂಘ, ಅರಸೀಕೆರೆ ತಾಲೂಕಿನ ಸಮಸ್ತ ಕುರುಬ ಸಮಾಜದ ಬಂಧುಗಳು ವತಿಯಿಂದ ದಿ 23/11/2025ನೇ ಭಾನುವಾರ ಕೆ ಆರ್ ನಗರದ ಕನಕ ಗುರು ಪೀಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಕನಕದಾಸರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದ್ದು ಈ ವಿಚಾರವಾಗಿ ಸುದ್ದಿಗೋಷ್ಠಿಯನ್ನು ಶಾಸಕರು, ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾದ ಕೆಎಂ. ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಿಳಿ ಚೌಡಯ್ಯನವರು ಸಮಾಜದ ಅಧ್ಯಕ್ಷರಾದ ತೊಂಡಿಗನಹಳ್ಳಿ ಕೃಷ್ಣಮೂರ್ತಿ ರವರು ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು ಕುರುಬ ಸಮಾಜದ ಮುಖಂಡರು ಆದಂತಹ ಬಾಣವರ ಶ್ರೀನಿವಾಸ್ ರವರು ಆಚರಣೆಯ ಸಮಿತಿಯ ಅಧ್ಯಕ್ಷರಾದ ಹರೀಶ್ ರವರು ಮುಖಂಡರಾದ ಗಿರಿ ಗೌಡರು ವಕೀಲರಾದ ಆದಿಹಳ್ಳಿ ಲೋಕೇಶ್ ಅವರು ಮುಖಂಡರಾದ ಗುತ್ತಿನಕೆರೆ ಶ್ರೀನಿವಾಸ್ ರವರು ನಗರಸಭಾ ಸದಸ್ಯರಾದ ಅವಿನಾಶ್ ರವರು ದಾಸಣ್ಣನವರು ಕರವೇ ನಗರ ಅಧ್ಯಕ್ಷರಾದ ಸಂತೋಷ್,  ನಿಕಟ ಪೂರ್ವ ಬಿಜೆಪಿ ನಗರಾಧ್ಯಕ್ಷರಾದ ಪುರುಷೋತ್ತಮ್,  ರವಿಕಿರಣ್, ಕರವೇ ರಾಜು, ಮಂಜುನಾಥ್,  ಬಸವರಾಜಪುರ ಬಸವರಾಜ,  ಅಹಲ್ಯಾಬಾಯಿ ಹೋಳ್ಕರ್ ಸಂಘದ ಗೌರವಾಧ್ಯಕ್ಷರಾದ ಯಶೋದಮ್ಮ, ಉಪಾಧ್ಯಕ್ಷರಾದ ಕಾವ್ಯ , ಭೀಮಾಂಬಿಕೆ ಮಹಿಳಾ ಸಂಘದ ಅಧ್ಯಕ್ಷರಾದ ದ್ರಾಕ್ಷಾಯಿಣಿ,  ಕರವೇ ನಗರಾಧ್ಯಕ್ಷರಾದ ಕಮಲಮ್ಮ, ಸಮಾಜದ ಇನ್ನೂ ಹಲವು ಮುಖಂಡರು, ಹಿತೈಷಿಗಳು, ಗುರುಹಿರಿಯರು ಭಾಗವಹಿಸಿದ್ದರು.

ವರದಿ: ರಾಜು ಅರಸಿಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!