Ad imageAd image

ಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸುವಂತಾಬೇಕು : ಆರ್. ಬಿ ತಿಮ್ಮಾಪುರ

Bharath Vaibhav
ಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸುವಂತಾಬೇಕು : ಆರ್. ಬಿ ತಿಮ್ಮಾಪುರ
WhatsApp Group Join Now
Telegram Group Join Now

ಜಮಖಂಡಿ : ಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸುವಂತಾಬೇಕು. ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು, ಕೆಟ್ಟ ಪ್ರವೃತ್ತಿ ಬಿಟ್ಟು ಒಗ್ಗಟ್ಟಿನಿಂದ ಬಸವತತ್ವಗಳ ಆಚರಣೆಗೆ ತರುವ ಮೂಲಕ ಎಲ್ಲರೂ ಸಮಾನರಾಗಿ ಬಾಳುವೆ ನಡೆಸಬೇಕು.ಡಾ.ಅಂಬೇಡ್ಕರ್‌ ಅವರು ನೀಡಿರುವ ಮತದಾನ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಕರೆ ನೀಡಿದರು.

ನಗರದ ಅಬುಬಕರ ದರ್ಗಾ ಮೈದಾನದಲ್ಲಿ ಶಹೀದ್‌ ಹಜರತ್‌ ಟಪ್ಪು ಸುಲ್ತಾನ ಜಯಂತ್ಯುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಕೌಮಿ ಏಕತಾ ಸಮಾಮೇಶ ಉದ್ದೇಶಿಸಿ ಮಾತನಾಡಿ, ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು.

ಆಗಿನ ಕಾಲದಲ್ಲೇ ರಾಕೆಟ್‌ಗಳನ್ನು ತಯಾರಿಸಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಅನೇಕ ಮಠ, ಮಂದಿರ ನಿರ್ಮಿಸಿದ್ದರು. ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಸ್ವಾರ್ಥಕ್ಕಾಗಿ ದೇಶವನ್ನು ಗಟ್ಟಿಯಾಗಿ ಕಟ್ಟಲು ಶ್ರಮಿಸಿದ ಟಿಪ್ಪು ಸುಲ್ತಾನರ ಇತಿಹಾಸ ತಿರುಚುವ ಕೆಲಸ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!