Ad imageAd image

ಆರ್.ಎಸ್.ಎಸ್ ದೆವ್ವವಿದ್ದಂತೆ. ಬಿಜೆಪಿ ದೆವ್ವದ ನೆರಳು.: ಪ್ರಿಯಾಂಕ್ ಖರ್ಗೆ 

Bharath Vaibhav
ಆರ್.ಎಸ್.ಎಸ್ ದೆವ್ವವಿದ್ದಂತೆ. ಬಿಜೆಪಿ ದೆವ್ವದ ನೆರಳು.: ಪ್ರಿಯಾಂಕ್ ಖರ್ಗೆ 
PRIYANKA KHARGE
WhatsApp Group Join Now
Telegram Group Join Now

ಬೆಂಗಳೂರು: ಆರ್.ಎಸ್.ಎಸ್ ದೆವ್ವವಿದ್ದಂತೆ. ಬಿಜೆಪಿ ದೆವ್ವದ ನೆರಳು. ನಾವು ನೆರಳಿನ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಆರ್.ಎಸ್.ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು ಮಕ್ಕಳನ್ನು ಹೇರಬೇಕು ಎನ್ನುತ್ತಾರೆ.

ಆದರೆ ಅವರು ಮಾತ್ರ ಬ್ರಹ್ಮಚಾರಿಯಾಗಿರುತ್ತಾರೆ. ಇದ್ಯಾವ ರೀತಿ? ಧರ್ಮ, ಜಾತಿಗಳ ನಡುವೆ ಜಗಳ ಹೆಚ್ಚಿಸುವವರೇ ದೇಶದ್ರೋಹಿಗಳು ಎಂದು ಅಂಬೇಡ್ಕರ್ ಹೇಳಿದ್ದಾರೆ.

ಮನುವಾದ ಪ್ರತಿಪಾದನೆ ಮಾಡುವವರು ಸಂವಿಧಾನವನ್ನು ಎತ್ತಿ ಹಿಡಿಯುತ್ತಾರಾ? ಎಂದು ಪ್ರಶ್ನಿಸಿದರು.ಅಂಬೇಡ್ಕರ್ ಹೆಸರು ಹೇಳೋದು ಫ್ಯಾಷನ್ ಆಗಿದೆ ಎಂದು ಅಮಿತ್ ಶಾ ಅವರು ಸಂಸತ್ ಸದನದಲ್ಲಿ ಹೇಳಿದ್ದರು.

ಪಾರ್ಲಿಮೆಂಟ್ ನಲ್ಲಿ ಇಂಥಹ ಹೇಳಿಕೆ ಕೊಟ್ಟಿದ್ದು ಅಹಂಕಾರವಲ್ಲವೇ? ೫೭ ವರ್ಷಗಳು ಕಳೆದರೂ ಆರ್.ಎಸ್.ಎಸ್ ನಮ್ಮ ದೇಶದ ಬಾವುಟ ಹಾರಿಸಲೇ ಇಲ್ಲ. ಅವರ್ಗೆ ಫಂಡಿಂಗ್ ಹೇಗೆ ಬರುತ್ತದೆ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಆರ್.ಎಸ್.ಎಸ್ ರಿಜಿಸ್ಟರ್ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಇವತ್ತಲ್ಲ ನಾಳೆ ಆರ್.ಎಸ್.ಎಸ್ ರಿಜಿಸ್ಟರ್ ಆಗಲೇಬೇಕು. ಇಲ್ಲವಾದಲ್ಲಿ ನಾನೇ ಮಾಡಿಸುತ್ತೇನೆ ಎಂದರು.

ಆರ್.ಎಸ್.ಎಸ್ ನವರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದಾರೆ, ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ. ಡೊನೆಷನ್ ತೆಗೆದುಕೊಳ್ಳಲ್ಲ. ಆದರೆ ಗುರುದಕ್ಷಿಣೆ ತೆಗೆದುಕೊಳ್ಳುತ್ತಾರೆ. ಗುರುದಕ್ಷಿಣೆ ಅಂದರೆ ಧ್ವಜದ ಹೆಸರಲ್ಲಿ ಹಣ ಸಂಗ್ರಹಿಸುತಾರೆ. ಆರ್.ಎಸ್.ಎಸ್ ಇಲ್ಲಾ ಎಂದರೆ ಬಿಜೆಪಿ, ಜೆಡಿಎಸ್ ಗಿಂತ ಕಡೆಯಾಗಲಿದೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!