ಮಡಿಕೇರಿ: ರಾಜ್ಯದಲ್ಲಿ ಮುಂದೆ ದಲಿತ ನಾಯಕನೇ ಮುಖ್ಯಮಂತ್ರಿ ಆಗಬೇಕು ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಚಿವ ಹೆಚ್.ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.
ಇಂದು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಇನ್ನೂ ದಲಿತ ಮುಖ್ಯಮಂತ್ರಿ ಕೂಗು ಮುಟ್ಟಿಲ್ಲ.
ಅದು ಸಿದ್ಧರಾಮಯ್ಯ ಸಿಎಂ ಆಗಿರೋದರಿಂದ ಆಗಿದೆ. ರಾಜ್ಯದಲ್ಲಿ ಮುಂದೆ ದಲಿತ ಸಿಎಂ ಆಗ್ಬೇಕು. ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಎಲ್ಲರೂ ಸೂಕ್ತ ದಲಿತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ದಲಿತ ನಾಯಕನ ಆಯ್ಕೆಯಲ್ಲಿ ಯಾವುದೇ ಗೊಂದಲ ಇರಬಾರದು. ಯಾಕೆಂದರೇ ರಾಜ್ಯದಲ್ಲಿ ದಲಿತರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸದಾ ಬೆನ್ನೆಲುಬು ಆಗಿದ್ದಾರೆ. ಅವರನ್ನು ಕಳೆದುಕೊಂಡರೇ ಪಕ್ಷ ಬಲವಾಗಿ ಇರೋದಕ್ಕೆ ಸಾಧ್ಯವಿಲ್ಲ ಎಂದರು.




