ಬೆಂಗಳೂರು: ಒಳ ಮೀಸಲಾತಿ ಗೊಂದಲ ನಿವಾರಣೆ ಮಾಡುವ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.
ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಒಳ ಮೀಸಲಾತಿಯಲ್ಲಿರುವ ಗೊಂದಲ ನಿವಾರಿಸುವಂತೆ ಮನವಿ ಮಾಡಿದೆ.
ರಾಜ್ಯಪಾಲರಿಫ಼ೆ ದೂರು ನೀಡಿದ ಬಳಿಕ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರ ಸಮರ್ಪಕವಾಗಿ ಒಳ ಮೀಸಲಾತಿ ನೀಡಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿದೆ.
25-30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡಿದರೂ ಸಿಎಂ ಸಿದ್ದರಾಮಯ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಯಾವುದನ್ನೂ ನ್ಯಾಯಯುತವಾಗಿ ಮಾಡಿಲ್ಲ. ಅಲೆಮಾರಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು
ರಾಜ್ಯ ಸರ್ಕಾರ ನಾಗಮೋಹನ್ ದಾಸ್, ಮಾಧುಸ್ವಾಮಿ ಯಾರ ವರದಿಯನ್ನೂ ಜಾರಿ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ.
2.85 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಒಳ ಮೀಸಲಾತಿ ಎಂದು ಗೊಂದಲಷೃಷ್ಟಿಸಿ ನೇಮಕಾತಿ ಮಾಡುತ್ತಿಲ್ಲ. ನೇಮಕಾತಿ ಪರವಾಗಿ ಬಿಜೆಪಿ ಇದೆ. ತಕ್ಷಣ ನೇಮಕಾತಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಬೇಕು. ಒಳಮೀಸಲಾತಿ ವರದಿ ಗಮನಿಸಿ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಚರ್ಚೆಯೇ ಇಲ್ಲದೇ ಬಿಲ್ ಪಾಸ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಅಲೇಮಾರಿಗಳಿಗೆ ಶೇ.೧ರಷ್ಟು ಮೀಸಲಾತಿ ಕೊಡಬೇಕು. ನೇಮಕಾತಿ ಪ್ರಕ್ರಿಯೆ ನಿಲ್ಲಿಸಬಾರದು. ಬಡ್ತಿ ನಿಲ್ಲಿಸಬಾರದು ಎಂದು ಹೇಳಿದರು.




