Ad imageAd image

ಶಾಸಕರು ಪತ್ರ ಬರೆದು ಕೇಳಿರುವುದರಲ್ಲಿ ತಪ್ಪೇನಿದೆ?: ಡಿ. ಕೆ ಶಿವಕುಮಾರ್ 

Bharath Vaibhav
ಶಾಸಕರು ಪತ್ರ ಬರೆದು ಕೇಳಿರುವುದರಲ್ಲಿ ತಪ್ಪೇನಿದೆ?: ಡಿ. ಕೆ ಶಿವಕುಮಾರ್ 
DKS
WhatsApp Group Join Now
Telegram Group Join Now

ಬೆಂಗಳೂರು : ಸಚಿವ ಸಂಪುಟ ಪುನಾರಚನಿಗೆ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಎಲ್ಲ ಶಾಸಕರಿಗೂ ಮಂತ್ರಿ ಆಗುವ ಆಸೆ ಇರುತ್ತೆ ಅಲ್ವಾ. ಶಾಸಕರು ಪತ್ರ ಬರೆದು ಕೇಳಿರುವುದರಲ್ಲಿ ತಪ್ಪೇನಿದೆ?ಎಂದು ತಿಳಿಸಿದರು.

ಪತ್ರಿಕೆಯಲ್ಲಿ ಈ ವಿಚಾರ ನೋಡಿದ್ದೇನೆ ಅಷ್ಟೇ, ನನಗೆ ಇನ್ನು ಪತ್ರ ತಲುಪಿಲ್ಲ. ಎಲ್ಲ ಶಾಸಕರಿಗೂ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತೆ ಮೋದಿ ಶಾಸಕರಾಗಿ ಆಯ್ಕೆ ಆಗದೆ ಸಿಎಂ ಆಗೋದ್ರು ಅಲ್ವಾ. ಅದಕ್ಕಾಗಿ ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಮುಖ್ಯಮಂತ್ರಿ ಆಗದಿದ್ದರೂ ಕೆಲವರು ಮಂತ್ರಿ ಆಗಿದ್ದವರು ಇದ್ದಾರೆ ಶಾಸಕರು ಆಗದೆ ಇದ್ದರೂ ಸಚಿವರಾದವರು ಇದ್ದಾರೆ.

ಅದಕ್ಕೆ ಶಾಸಕರು ಸಂಪುಟ ಪುನಾರ ರಚನೆಗೆ ಬೇಡಿಕೆ ಇಟ್ಟಿದ್ದಾರೆ. ಪಕ್ಷದ ಶಾಸಕರು ಪತ್ರ ಬರೆದು ಕೇಳಿರುವುದು ತಪ್ಪೇನಿದೆ? ಹೊಸ ಪೀಳಿಗೆ ಬೆಳೆಯಬೇಕು ಅಲ್ವಾ? ನಾನು ಮೊದಲ ಬಾರಿ ಮಂತ್ರಿಯಾಗಿ 36 ವರ್ಷಗಳು ಆಯ್ತು ಹೊಸ ಜನರೇಷನ್ ಬರಬೇಕು ಹೊಸ ಆಲೋಚನೆ ಬರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!