Ad imageAd image

ಪಕ್ಷದಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಗೊಂದಲ ಉಂಟಾಗಿದೆ : ಸತೀಶ್ ಜಾರಕಿಹೊಳಿ

Bharath Vaibhav
ಪಕ್ಷದಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಗೊಂದಲ ಉಂಟಾಗಿದೆ : ಸತೀಶ್ ಜಾರಕಿಹೊಳಿ
WhatsApp Group Join Now
Telegram Group Join Now

ದಾವಣಗೆರೆ : ಸದ್ಯದ ಸ್ಥಿತಿಯಲ್ಲಿ ಮುಂದುವರೆದರೆ ಮುಂದೆ ಕಾಂಗ್ರೆಸ್ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಷ್ಟ ಎಂಬ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ಸಚಿವ ಸತೀಶ್​​ ಜಾರಕಿಹೊಳಿ ಸಹಮತ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಕಾರ್ಯಕರ್ತರು, ಶಾಸಕರು ಮತ್ತು ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.

ಈ ಪರಿಸ್ಥಿತಿ ಶೀಘ್ರವಾಗಿ ತಿಳಿಗೊಳ್ಳಬೇಕು. ಪಕ್ಷದ ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆಯನ್ನು ನಿವಾರಿಸಲು ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು.

ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ನಿಂದ ಸ್ಪಷ್ಟ ನಿರ್ದೇಶನ ಬಂದರೆ ಮಾತ್ರ ಈ ಗೊಂದಲ ನಿಲ್ಲುತ್ತದೆ. ಹೈಕಮಾಂಡ್ ಒಂದು ದಿನದಲ್ಲಿಯೇ ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!