Ad imageAd image

ಡಾ.ಬಿ.ಆರ್. ಅಂಬೇಡ್ಕರ್ 135ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ 119ನೇ ಮಹನೀಯರ ಜಯಂತಿ ಆಚರಣೆ

Bharath Vaibhav
ಡಾ.ಬಿ.ಆರ್. ಅಂಬೇಡ್ಕರ್ 135ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ 119ನೇ ಮಹನೀಯರ ಜಯಂತಿ ಆಚರಣೆ
WhatsApp Group Join Now
Telegram Group Join Now

ಶಿರಹಟ್ಟಿ : ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಕಾರ ರಾಷ್ಟ್ರ ನಾಯಕ ಡಾ ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠದಲ್ಲಿ ಇಬ್ಬರು ಮಹನೀಯರು ಭಾವಚಿತ್ರಕ್ಕೆ ಶಾಸಕರು ಡಾ ಚಂದ್ರು ಲಮಾಣಿ ಅವರು ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.

ನಂತರ ವಾದ್ಯ ಮೇಳ ಹಾಗೂ ಬೈಕ್ ರ್ಯಾಲಿ ಯೊಂದಿಗೆ ಟ್ರಾಕ್ಟರ್ ನಲ್ಲಿ ಇಬ್ಬರು ಮಹನೀಯರು ಭಾವಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ತಹಶೀಲ್ದಾರ್ ಕಚೇರಿಯನ್ನು ತಲುಪಿ ವೇದಿಕೆ ಕಾರ್ಯಕ್ರಮ ಆರಂಭವಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆಯ್ ಎಸ್ ಮಾದರ ಅವರು ಮಾತನಾಡುತ್ತಾ ಬಿ ಆರ್ ಅಂಬೇಡ್ಕರ್ ಅವರು ಸಾಮಾಜಿಕ ಕ್ರಾಂತಿಯನ್ನು ಮಾಡದೆ ಹೋಗಿದ್ದರೆ ಇಂದು ನಾವು ನೀವೆಲ್ಲ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದರು ಪ್ರಗತಿ ವಿದ್ಯೆಯೇ ಮೂಲ ಕಾರಣ ಅಂಬೇಡ್ಕರ್ ಹೇಳಿದರು.

ಮಹಿಳಾ ಸಬಲೀಕರಣ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹಿಂದೂ ಕೋಡ್ ಬಿಲ್ ಮಂಡಿಸಿದರುದಲಿತರ ಹಕ್ಕುಗಳ ಹೋರಾಟ ಮಹಾಡ್ ಸತ್ಯಾಗ್ರಹದ ಮೂಲಕ ಶೋಷಿತರಿಗೆ ಸಾರ್ವಜನಿಕ ನೀರು ಪಡೆಯುವ ಹಕ್ಕು ಮತ್ತು ದೇವಸ್ಥಾನ ಪ್ರವೇಶದ ಹಕ್ಕಿಗಾಗಿ ಹೋರಾಡಿದರು ಅಂಬೇಡ್ಕರ್ ಅವರ ಕೊಡುಗೆ ಮಹತ್ವದ್ದು ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ಡಾ ಚಂದ್ರು ಲಮಾಣಿ ಅವರು ಮಾತನಾಡುತ್ತಾ 1990 ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ಎಂಬ ತತ್ವ ಇಂದಿಗೂ ದಾರಿದೀಪವಾಗಿದೆ ಮೊದಲು ಎಲ್ಲರಿಗೂ ಮತದಾನದ ಹಕ್ಕು ಇರಲಿಲ್ಲ ಡಾ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಯಶಸ್ಸಿಗೆ ವಯಸ್ಕ ಮತದಾನದ ಹಕ್ಕು ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸಿದರು ಕೆಲವು ಜನರು ಮಾತ್ರ ಮತದಾನದ ಹಕ್ಕು ಇತ್ತು ಅಂಬೇಡ್ಕರ್ ಅವರು ಮೊದಲ ಬಾರಿಗೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಮತದಾನ ಮಾಡುವ ಹಕ್ಕು ನೀಡಿ ಎಂದು ಒತ್ತಾಯ ಮಾಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ಮುಖಂಡರುಗಳು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶಿರಹಟ್ಟಿ ತಾಲ್ಲೂಕು ಎಲ್ಲಾ ಗ್ರಾಮದ ದಲಿತ ಸಂಘಟನೆ ಯುವ ಮುಖಂಡರು ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು.

ವರದಿ : ಅಣ್ಣಪ್ಪ ಗುತ್ತೆಮ್ಮನವರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!