Ad imageAd image

ಇಂದು ಅಕ್ಷಯ ತೃತೀಯ : ₹20,000 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮಾರಾಟ ನಿರೀಕ್ಷೆ

Bharath Vaibhav
ಇಂದು ಅಕ್ಷಯ ತೃತೀಯ : ₹20,000 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮಾರಾಟ ನಿರೀಕ್ಷೆ
GOLD
WhatsApp Group Join Now
Telegram Group Join Now

ನವದೆಹಲಿ: ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಇಂದು ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

ಈ ವರ್ಷ ಅಖಿಲ ಭಾರತೀಯ ವರ್ತಕರ ಒಕ್ಕೂಟ (CAIT) ದೇಶಾದ್ಯಂತ ಸುಮಾರು ₹20,000 ಕೋಟಿ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಮಾರಾಟವಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ಮಾರಾಟದಲ್ಲಿ ಏರಿಕೆ: ಕಳೆದ ವರ್ಷ ಅಕ್ಷಯ ತೃತೀಯದಂದು ಸುಮಾರು ₹16,000 ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಈ ಬಾರಿ ಆ ಮೊತ್ತ ₹20,000 ಕೋಟಿಗೆ ಏರುವ ಸಾಧ್ಯತೆಯಿದೆ.

ಟನ್ ಲೆಕ್ಕದಲ್ಲಿ ಮಾರಾಟ: ಈ ವಿಶೇಷ ದಿನದಂದು ದೇಶಾದ್ಯಂತ ಸುಮಾರು 10 ಟನ್ ಚಿನ್ನ ಮತ್ತು 157 ಟನ್ ಬೆಳ್ಳಿ ಮಾರಾಟವಾಗುವ ಅಂದಾಜಿದೆ.

ಬೆಲೆ ಏರಿಕೆಯ ನಡುವೆಯೂ ಬೇಡಿಕೆ: ಚಿನ್ನದ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 25% ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 10 ಗ್ರಾಂ ಚಿನ್ನದ ಬೆಲೆ ಸುಮಾರು 1 ಲಕ್ಷ ರೂ. ಇತ್ತು, ಈ ಬಾರಿ ಅದು 1.58ಲಕ್ಷ ರೂ. ದಾಟಿದೆ. ಆದರೂ ಗ್ರಾಹಕರಲ್ಲಿ ಖರೀದಿ ಉತ್ಸಾಹ ಕಡಿಮೆಯಾಗಿಲ್ಲ.

ಬೆಳ್ಳಿ ಬೆಲೆ: ಬೆಳ್ಳಿಯ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ₹85,000 ಇದ್ದದ್ದು, ಇದೀಗ 2.55 ಲಕ್ಷ ರೂ. ತಲುಪಿದೆ.

ಗ್ರಾಹಕರಲ್ಲಿ ಹಬ್ಬದ ಸಂಭ್ರಮ:

ಸೋಮವಾರವಾದ ಇಂದು ಮುಂಜಾನೆಯಿಂದಲೇ ಜ್ಯುವೆಲ್ಲರಿ ಮಳಿಗೆಗಳ ಮುಂದೆ ಜನಜಂಗುಳಿ ಕಂಡುಬರುತ್ತಿದೆ. ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ನಾಣ್ಯಗಳಿಂದ ಹಿಡಿದು ಭಾರೀ ಆಭರಣಗಳವರೆಗೆ ವಿವಿಧ ಮಾದರಿಯ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ.

ವ್ಯಾಪಾರಿಗಳ ಪ್ರಕಾರ, ಈ ಬಾರಿ ಆಭರಣಗಳ ಜೊತೆಗೆ ‘ಡಿಜಿಟಲ್ ಗೋಲ್ಡ್’ ಮತ್ತು ಗೋಲ್ಡ್ ಇಟಿಎಫ್‌ಗಳ ಮೇಲೆಯೂ ಹೂಡಿಕೆದಾರರು ಆಸಕ್ತಿ ತೋರಿಸುತ್ತಿದ್ದಾರೆ. ಒಟ್ಟಾರೆಯಾಗಿ, ಬೆಲೆ ಏರಿಕೆಯ ಬಿಸಿಯ ನಡುವೆಯೂ ಅಕ್ಷಯ ತೃತೀಯದ ನಿಮಿತ್ತ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಮನೆಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!