ನವದೆಹಲಿ : ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ನಡುವಿನ ಶ್ರೀಮಂತಿಕೆಯ ರೇಸ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ರಿಲಯನ್ಸ್ ಸಂಸ್ಥೆಯ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಭಾರತ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅದಾನಿ ನಂಬರ್ ಒನ್: ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ ಸುಮಾರು 92.6 ಬಿಲಿಯನ್ ಡಾಲರ್ (ಅಂದಾಜು 7.73 ಲಕ್ಷ ಕೋಟಿ ರೂ.) ಗೆ ಏರಿಕೆಯಾಗಿದೆ. ಜಾಗತಿಕ ಪಟ್ಟಿಯಲ್ಲಿ ಅದಾನಿ 19ನೇ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನಕ್ಕೆ ಅಂಬಾನಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳ ಷೇರು ಕುಸಿತದಿಂದಾಗಿ ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ 90.8 ಬಿಲಿಯನ್ ಡಾಲರ್ (ಸುಮಾರು 7.58 ಲಕ್ಷ ಕೋಟಿ ರೂ.) ಗೆ ಇಳಿಕೆಯಾಗಿದೆ. ಇವರು ಜಾಗತಿಕ ಪಟ್ಟಿಯಲ್ಲಿ 20ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಲಾನ್ ಮಸ್ಕ್ ದರ್ಬಾರ್: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಒಡೆಯ ಎಲಾನ್ ಮಸ್ಕ್ 656 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಪಟ್ಟಿಯಲ್ಲಿರುವ ಟಾಪ್-6 ಭಾರತೀಯರು:
ಗೌತಮ್ ಅದಾನಿ (19ನೇ ಸ್ಥಾನ) ಆಸ್ತಿಮೌಲ್ಯ – 92.6
ಮುಕೇಶ್ ಅಂಬಾನಿ (20ನೇ ಸ್ಥಾನ) ಆಸ್ತಿಮೌಲ್ಯ – 90.8
ಲಕ್ಷ್ಮೀ ಮಿತ್ತಲ್ (62ನೇ ಸ್ಥಾನ) ಆಸ್ತಿಮೌಲ್ಯ – 36.9
ಶಿವ ನಾದರ್ (70ನೇ ಸ್ಥಾನ) ಆಸ್ತಿಮೌಲ್ಯ – 33.5
ಶಾಪೂರ್ ಮಿಸ್ತ್ರಿ ಕುಟುಂಬ (71ನೇ ಸ್ಥಾನ) 33.
ಸಾವಿತ್ರಿ ಜಿಂದಾಲ್ : ಒಪಿ ಜಿಂದಾಲ್ ಗ್ರೂಪ್ – 32.7
ಅಮೆರಿಕನ್ನರ ಹವಾ
ವಿಶ್ವದ ಟಾಪ್-20 ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕದ 15 ಮಂದಿ ಉದ್ಯಮಿಗಳಿದ್ದಾರೆ. ಲ್ಯಾರಿ ಪೇಜ್, ಜೆಫ್ ಬೇಜೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ಭಾರತೀಯ ಉದ್ಯಮಿ ಸಾವಿತ್ರಿ ಜಿಂದಾಲ್ (73ನೇ ಸ್ಥಾನ).




