Ad imageAd image

ಮೋದಿಯವರ ಮಂಗಗಳ ಸೇನೆ ಬಹಳ ಚೆನ್ನಾಗಿದೆ : ಕಲ್ಯಾಣ ಬ್ಯಾನರ್ಜಿ ವ್ಯಂಗ್ಯ 

Bharath Vaibhav
ಮೋದಿಯವರ ಮಂಗಗಳ ಸೇನೆ ಬಹಳ ಚೆನ್ನಾಗಿದೆ : ಕಲ್ಯಾಣ ಬ್ಯಾನರ್ಜಿ ವ್ಯಂಗ್ಯ 
WhatsApp Group Join Now
Telegram Group Join Now

ನವದೆಹಲಿ : ಇವತ್ತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗುತ್ತಾ? ಎಂದು ಕಾದು ನೋಡಬೇಕಾಗಿದೆ. ಏಕೆಂದರೆ ಮಹಿಳಾ ಮೀಸಲಾತಿಗೆ ಸರ್ವ ಪಕ್ಷಗಳ ಬಲ ಸಿಗುತ್ತಾ? ಎಂದು ಕಾದು ನೋಡಬೇಕಾಗಿದೆ.

ಮಹಿಳಾ ಮೀಸಲಾತಿಗೆ ನಮ್ಮದೇನು ತಕರಾರು ಇಲ್ಲ ಆದರೆ ಕ್ಷೇತ್ರಗಳ ಮರು ವಿಂಗಡಣೆ ಇದಕ್ಕೆ ಲಿಂಕ್ ಮಾಡುತ್ತಿದ್ದಾರಲ್ಲ ಅದಕ್ಕೆ ನಮ್ಮ ವಿರೋಧವಿದೆ ಎಂದು ವಿಪಕ್ಷಗಳು ಈಗಾಗಲೇ ಟಿಕೆ ಶುರು ಮಾಡಿವೆ.

ಇನ್ನುಇದೇ ಸಂದರ್ಭದಲ್ಲಿ TMC ಸಂಸದ ಕಲ್ಯಾಣ್ ಬ್ಯಾನರ್ಜಿ ವ್ಯಂಗ್ಯವಾಡಿದ್ದು, ಮೋದಿ ಅವರ ಮಂಗಗಳ ಸೇನೆ ಬಹಳ ಚೆನ್ನಾಗಿದೆ. ಶ್ರೀರಾಮನ ಜೊತೆ ಹನುಮಾನ್ ಇದ್ದರು ಮೋದಿ ಅವರ ಪಾಲಿಗೆ ಕೋತಿಗಳು ಸಿಕ್ಕಿವೆ ಎಂದು ಬಿಜೆಪಿಯ ಉಳಿದಂತ ಸಂಸದರನ್ನು ಮಂಗಗಳು ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ. ನಾವು ನಾರಿ ಶಕ್ತಿಯನ್ನು ಪೂಜಿಸುತ್ತೇವೆ. ನಮ್ಮ ಬಳಿ ಕಾಳಿಮಾತೆ ದುರ್ಗಾಮಾತೆಯರು ಇದ್ದಾರೆ.

ನಾವು ಸಿಯಾರಾಮ್ ಎನ್ನುತ್ತೇವೆ. ನೀವು ಶ್ರೀರಾಮ್ ಅನ್ನುತ್ತೀರಿ. ನೀವು ಕೇವಲ ಜೈ ಶ್ರೀ ರಾಮ್ ಅಂತೀರಿ ನಾವು ಕಾಳಿ, ದುರ್ಗಾ ಮಾತೆಯ ಭಕ್ತರಿದ್ದೇವೆ ಶ್ರೀರಾಮನು ದುರ್ಗಾಮಾತೆಯ ಪೂಜೆ ಮಾಡಿದ ನೀವು ಸೀತೆಯ ಹೆಸರನ್ನು ಏಕೆ ಹೇಳುತ್ತಿಲ್ಲ? ಸೀತೆಯನ್ನು ಬಿಟ್ಟು ರಾಮ ಇರೋಕೆ ಹೇಗೆ ಸಾಧ್ಯ? ಹೀಗಾಗಿ ನಾವು ಜೈ ಸಿಯಾರಾಮ ಅಂತ ಹೇಳುತ್ತೇವೆ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!