ಭಾಲ್ಕಿ : ಶಿಕ್ಷಕರ ಹಿತಾಶಕ್ತಿಗಾಗಿ ಕೆಲಸ ಮಾಡುವ ಸಂಘಟನೆಯ ಪದಾಧಿಕಾರಿಗಳಿಗೆ ಗೆಲ್ಲಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ನಿರಂಜಪ್ಪ ಪಾತ್ರೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಪೆನಾಲ್ ಶಿಕ್ಷಕರ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶಿಕ್ಷಕರ ಕುಂದು ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಘಟನೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಾನ್ಯತೆ ನೀಡಿದೆ. ಇದೇ ಎ. 19 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಯುತ್ತಲಿದೆ ಇದರಲ್ಲಿ ಸ್ವಾಭಿಮಾನಿ ಪೆನಾಲ ಹೇಳ್ಳಬೇಕಾದದ್ದು ಅತ್ಯಾವಶಕ ಎಂದರು.
ನಿವೃತ್ತ ಶಿಕ್ಷಕ ಡಾ. ಕಾಶಿನಾಥ ಚಲವಾ ಮಾತನಾಡಿ, ಸುಮಾರು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಶಕ್ತಿಯ ಶಿಕ್ಷಕರು ಶಿಕ್ಷಕ ಸಂಘಟನೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಶಿಕ್ಷಕರ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಭಿಮಾನಿ ಶಿಕ್ಷಕರೆಲ್ಲರೂ ಸೇರಿ ಸಂಘಟನೆ ಮಾಡಿ, ಮುಂದಿನ ದಿನದಲ್ಲಿ ಶಿಕ್ಷಕರಿಗಾಗಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ಹೀಗಾಗಿ ಬಸವರಾಜ ದಾನಾ ನೇತೃತ್ವದಲ್ಲಿನ ಸ್ವಾಭಿಮಾನಿ ಶಿಕ್ಷಕರ ಸಂಘಕ್ಕೆ ಚುನಾವಣೆಯಲ್ಲಿ ಗೆಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಹಿತವನ್ನು ಕಾಪಾಡಿಕೊಂಡು ಹೋಗಬೇಕು ಎಂದು ನುಡಿದರು.
ಮುಖಂಡರಾದ ಬಾಲಾಜಿ ಬೈರಾಗಿ, ಗಣಪತಿ ಭಕ್ತಾ, ಸುಧಾಕರ ಗಾಯಕವಾಡ ಮಾತನಾಡಿ, ಸಂಘವು ಶಿಕ್ಷಕರ ಹಿತಕ್ಕಾಗಿ ದುಡಿಯುಂತಿರಬೇಕು. ಆದರೆ ಮೊದಲಿನ ಸಂಘಟನೆಯ ಪದಾಧಿಕಾರಿಗಳು ಶಾಲು, ಹಾರ, ತುರಾಯಿಗೆ ಸೀಮಿತರಾಗಿದ್ದುದು ದುರದೃಷ್ಟಕರ ಸಂಗತಿ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಲ್ಯಾಣರಾವ ಕುಂಬಾರಗೆರೆ, ಸಂದೀಪ ಉಮಾಜಿ, ಗೋವಿಂದರಾವ ಬಿರಾದಾರ, ಸಂಗೀತಾ ನಿಟ್ಟೂರೆ, ಸತ್ಯವಾನ ಕಾಂಬಳೆ, ದತ್ತಾತ್ರಿ ಕಾಟಕರ, ನಾಗನಾಥ ಭೊಸರೆ, ಅನಿತಾ ಮುಧೋಳೆ, ಬಸವರಾಜ ದಾನಾ, ದತ್ತು ಮುದಾಳೆ, ಗಣೇಶ ಸ್ವಾಮಿ, ರಾಮರಾವ ಬಾನಾ, ನರ್ಮಲಾ ಚಲವಾ, ವಿಜಯಲಕ್ಷಿö್ಮ ಪುಜಾರಿ, ರಾಜಕುಮಾರ ಬಿರಾದಾರ, ಮೊಹಮದ ಮುಜಾಮಲ್ಲಿ ಮತ್ತಿತರರು ಇದ್ದರು.
ವರದಿ : ಸಂತೋಷ್ ಬಿಜಿ ಪಾಟೀಲ




