ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಇಂಚಲ ಗ್ರಾಮದ ರೇವಣಸಿದ್ದೇಶ್ವರ ನಗರದಲ್ಲಿ ಜಾಗೃತ ಶ್ರೀ ಆಂಜನೇಯ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಇಂಚಲದ ಶ್ರೀ ಶ್ರೀ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಕುಳ್ಳೂರ ಶ್ರೀ ಶಿವಯೋಗೀಶ್ವರ ಕಲ್ಮಠದ ಪರಮ ಪೂಜ್ಯ ಶ್ರೀ ಬಸವಾನಂದ ಭಾರತಿ ಮಹಾ ಸ್ವಾಮೀಜಿಗಳು ಮಲ್ಲಾಪುರ ಗಾಳೇಶ್ವರ ಮಠದ ಪೂಜ್ಯ ಶ್ರೀ ಚಿದಾನಂದ ಭಾರತಿ ಮಹಾಸ್ವಾಮೀಜಿಗಳು ಇಂಚಲ ಮಠದ ಆಡಳಿತ ಅಧಿಕಾರಿಗಳಾದ ಪರಮಪೂಜ್ಯ ಪೂರ್ಣಾನಂದ ಭಾರತಿ ಮಹಾಸ್ವಾಮೀಜಿಗಳು, ಹುಬ್ಬಳ್ಳಿಯ ಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
18 ರಂದು ಶನಿವಾರ ಸುಮಾರು 250ಕ್ಕೂ ಹೆಚ್ಚು ಸುಮಂಗಲೆಯರು ಕುಂಭ ಹೊತ್ತುಕೊಂಡು ಡೊಳ್ಳು, ಜಾನ್ಜ್, ಕರಡಿಮಜಲು ಇನ್ನೂ ಹೆಚ್ಚು ಸಾಂಪ್ರದಾಯಿಕ ವಾದ್ಯ ಮೇಳದೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಮೂರ್ತಿ ಮೆರವಣಿಗೆ ಸ್ವಾಗತಿಸಲಾಯಿತು. ರವಿವಾರ 19ರಂದು ಮನೋಹರ ಸ್ವಾಮಿಗಳು ಹಿರೇಮಠ ಅವರಿಂದ ಹೋಮ ಹವನ ಜರುಗಿತು. ಸೋಮವಾರ 20ರಂದು ಬ್ರಾಹ್ಮಿ ಮುಹೂರ್ತದಲ್ಲಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಶ್ರೀಗಳಿಂದ ಜರುಗಿತು. ನಂತರ ನಡೆದ ಧರ್ಮ ಸಭೆಯಲ್ಲಿ ಪೂಜ್ಯರೆಲ್ಲರೂ ಆಶೀರ್ವಚನ ನೀಡಿದರು.
ಸ್ವಾಗತ ಶ್ರೀ ಸೋಮಲಿಂಗ ಶಿ ಮೆಟಗಟ್ಟಿ ಅವರಿಂದ ವಂದನಾರ್ಪಣೆ ಶ್ರೀ ಈರಣ್ಣ ಕಾಜಗಾರ, ಅವರಿಂದ ಕಾರ್ಯಕ್ರಮದ ನಿರೂಪಣೆ ಶ್ರೀ ಶಿವಾಜಿ ನಲವಡೆ ಅವರಿಂದ ನಡೆಯಿತು. ಕಟ್ಟಡದ ನಿರ್ಮಾಣಕ್ಕಾಗಿ ದೇನಿಗೆ ನೀಡಿದವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಸರಕಾರದ ವಿವಿಧ ಇಲಾಖೆಯ ನೌಕರರು, ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿಯವರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮತ್ತು ಇಂಚಲ ಗ್ರಾಮದ ಗುರುಹಿರಿಯರು, ಜಾಗೃತ ಆಂಜನೇಯ ಮಂದಿರದ ಎಲ್ಲಾ ಕಮಿಟಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ದುಂಡಪ್ಪ ಹೂಲಿ




