ಚಿಂಚೋಳಿ : ಶಾದಿಪುರ ಗ್ರಾಮದಲ್ಲಿ ಯುವ ಕರ್ನಾಟಕ ವೇದಿಕೆ ಸಂಘಟನೆ ವತಿಯಿಂದ ಕೆಂಪು ಮಣ್ಣು ಮಾರಾಟ ಮಾಡುವುದನ್ನು ಕುರಿತು ಪ್ರತಿಭಟನೆ ಮಾಡಲಾಯಿತು ಕಾರಣ ಪರಿಶಿಷ್ಟ ಜಾತಿಗೆ ಹಾಗೂ ಮೈನಾರಿಟಿ ಸಂಬಂಧಿಸಿದ ಜಾತಿಗೆ ಸೇರಿದ ಭೂಮಿಯನ್ನು ಕೆಂಪು ಮಣ್ಣು ಮಾರಾಟ ಮಾಡುತ್ತಿದ್ದಾರೆ ಕೆಂಪು ಮಣ್ಣು ಮಾಫಿಯಾ ಹೆಚ್ಚು ವಾಗಿದೆ ಅದರ ಪ್ರಯುಕ್ತ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.ಪ್ರತಿಭಟನಾಕಾರರನ್ನು ಕೋಂಚರಾಮ ಪೊಲೀಸರು ಬಂಧಿಸಿ ಬಸ್ಸಿನಲ್ಲಿ ತೆಗೆದುಕೊಂಡು ಹೋಗಿದ್ದರು ಎಂದು ಪ್ರತಿಭಟನಾಕಾರರಾದ ಶಂಕರ್ ಪವ್ಹಾರ್ .ಶಯ್ಯದ್ ಶಬ್ಬೀರ್ ಅವರು ತಿಳಿಸಿದ್ದಾರೆ ಇದು
ಚಿಂಚೋಳಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮದಲ್ಲಿ ಒಟ್ಟು 188 ಎಕರೆ ಜಮೀನನ್ನು 59 ರೈತರಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸರ್ವೇ ನಂ.126/1ರಲ್ಲಿ 51 ರೈತರು, 126/3ರಲ್ಲಿ 3 ರೈತರು ಹಾಗೂ 126/05ರಲ್ಲಿ 12 ರೈತರು ಸೇರಿದ್ದಾರೆ. ಆದರೆ, ಈವರೆಗೆ ಜಮೀನಿಗೆ ಸಂಬಂಧಿಸಿದ ಫಾರಂ ನಂ.10 ವಿತರಣೆ ಆಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ರೈತರಿಗೆ ಕಾನೂನುಬದ್ಧ ದಾಖಲೆಗಳ ಕೊರತೆ ಉಂಟಾಗಿದ್ದು,ತಮ್ಮ ಹಕ್ಕುಗಳನ್ನು ಬಳಸಿಕೊಳ್ಳಲು ಆಡಚಣೆ ಎದುರಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು, ಜಮೀನಿನಲ್ಲೇ ಕೆಲವು ವ್ಯಕ್ತಿಗಳು ಕಾನೂನುಬಾಹಿರವಾಗಿ ಕೆಂಪು ಮಣ್ಣು ಗಣಿಗಾರಿಕೆ ನಡೆಸುತ್ತಿರುವುದಾಗಿ ರೈತರ.ದೂರು ನೀಡಿದರೂ ಕೂಡ ಸಂಬಂಧ ಪಟ್ಟ ಯಾವುದೇ ಅಧಿಕಾರಿಗಳು ಈ ಒಂದು ಸ್ಥಳಕ್ಕೆ ಪರಿಶೀಲಿನ ಮಾಡಿದ್ದರು ಕೂಡ ಕೆಂಪು ಮಣ್ಣು ಮಾರಾಟ ಮಾಡುವಂತ ಮಾಫಿಯಾ ಜನರು ನಿಲ್ಲಿಸುತ್ತಿಲ್ಲ.
ಈ ಕುರಿತು ರೈತ ಶಂಕರ್ ಪ್ರತಿಕ್ರಿಯಿಸಿ,ಹೊರರಾಜ್ಯದ ಕೆಲವರು ಹಾಗೂ ಸ್ಥಳೀಯ ವ್ಯಕ್ತಿಗಳ ಸಹಕಾರದಿಂದ ಈ ಅಕ್ರಮ ನಡೆಯುತ್ತಿದೆ ಎಂಬ ಅನುಮಾನವಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ,ಎಂದು ತಿಳಿಸಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವಂತೆ ಆಗ್ರಹಿಸಿದ ರೈತರು,ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೆ ಗಣಿಗಾರಿಕೆ ಸ್ಥಳದಲ್ಲೇ ತಾತ್ಕಾಲಿಕ ಶಿಬಿರ ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ.ಪ್ರತಿಭಟನೆಯಲ್ಲಿ ಶಂಕರ್ ಪವಾರ್, ಪ್ರೇಮ್ ಸಿಂಗ್ ರಾಠೋಡ್, ಶಂಕ್ರಯ್ಯ, ಮಹೇಂದ್ರ ಚೌಹಾಣ್,ಲಿಂಗು ಪವಾರ್, ರೂಪಸಿಂಗ್, ಮೋಹನ್ ಎಂಜಿ,ರಾಮಚಂದ್ರ, ಬಿಚ್ಚಪ್ಪ, ಅಂಬ್ರು ನರಸಿಂಗ್,ತಹರಿ ಬಾಯಿ, ಗೋಪಿ ಬಾಯಿ,ಕಮಲ ಬಾಯಿ,ದೇವಿಬಾಯಿ,ವೆಂಕಟೇಶ್ ಶಾದಿಪುರ್, ಶಾಂತಮ್ಮ,ಕಸ್ತೂರಿ ಬಾಯಿ,ರೂಕ್ಕಿಬಾಯಿ, ವೆಂಕಟಮ್ಮ,ಪಾರ್ವತಮ್ಮ ಇನ್ನಿತರ ರೈತರು ಇದ್ದರು.
ವರದಿ : ಸುನಿಲ್ ಸಲಗರ




